ಕೋಳಿ ಸಾಕಾಣಿಕೆ ಲಾಭದಾಯಕ:ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.28: ನಾಟಿಕೋಳಿ ಸಾಕಾಣಿಕೆ ರೈತರಿಗೆ ಲಾಭದಾಯಕ ಹಾಗೂ ಹೆಚ್ಚು ಬೇಡಿಕೆಯಿರುವ ಆಹಾರ ಪದಾರ್ಥವಾಗಿದ್ದು ರೈತರುಗಳು ಈ ಕುಕ್ಕಟೋದ್ಯಮವನ್ನು ಅನುಪಾಲನೆ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಹೆಚ್.ಟಿ.ಮಂಜು ಕರೆ ನೀಡಿದರು.
ಅವರು ಪಟ್ಟಣದ ಪಶುವೈದ್ಯಕೀಯ ಇಲಾಖೆಯಲ್ಲಿ ಏರ್ಪಡಿಸಿದ್ದ ಅರ್ಹ ಫಲಾನುಭವಿಗಳಿಗೆ ನಾಟಿಕೋಳಿಮರಿಗಳನ್ನು ವಿತರಿಸಿ ಮಾತನಾಡಿದರು.
ರೈತಾಪಿವರ್ಗದ ಜನತೆ ಕೃಷಿಯ ಜೊತೆಗೆ ಹೈನುಗಾರಿಕೆ, ಕುರಿ, ಕೋಳಿ, ಮೇಕೆ ಸಾಕಾಣಿಕೆ, ಅಣಬೆ ಮುಂತಾದ ಸಣ್ಣ ಉದ್ದಿಮೆಗಳನ್ನು ಕೈಗೊಳ್ಳುವ ಮೂಲಕ ಸ್ವಉದ್ಯೋಗವಂತರಾಗಿ ಆರ್ಥಿಕವಾಗಿ ಸಬಲರಾಗಬೇಕು. ಮಾಡುವಂತಹ ಎಲ್ಲಾ ಚಟುವಟಿಕೆಗಳನ್ನು ಬದ್ದತೆಯಿಂದ, ನಿಷ್ಠೆಯಿಂದ ಮಾಡಿದಾಗ ಯಾವುದೇ ವ್ಯಾಪಾರ ವಹಿವಾಟಿನಲ್ಲಿಯೂ ಸಹ ಯಶಸ್ಸನ್ನು ಗಳಿಸಬಹುದು.
ಈ ನಿಟ್ಟಿನಲ್ಲಿ ಕುಕ್ಕಟೋದ್ಯಮವನ್ನು ಪೆÇ್ರೀತ್ಸಾಹಿಸಲು ಅರ್ಹ 85 ಮಹಿಳೆಯರಿಗೆ ತಲಾ 20 ನಾಟಿಕೋಳಿ ಮರಿಗಳನ್ನು ನೀಡಲಾಗುತ್ತಿದೆ ನಾಟಿಕೋಳಿಯ ಸಂತತಿಯನ್ನು ಅಭಿವೃದ್ದಿಪಡಿಸಿ ಆರ್ಥಿಕಲಾಭವನ್ನು ಗಳಿಸಬೇಕು.
ಅಲ್ಲದೇ ರೇಬಿಸ್ ಚುಚ್ಚುಮದ್ದಿನ ಬಗ್ಗೆ ಜಾಗೃತೆ ಮೂಢಿಸುವ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮವಾಗಿದ್ದು ಉಚಿತ ಲಸಿಕೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜು, ಡಾ,ಚೇತನ್, ಲಿಖಿತ ಸೇರಿದಂತೆ ಹಲವರಿದ್ದರು.