ಅಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೆ ದಸಂಸ ಮನವಿ
ಮಾಲೂರು, ಸೆ.೨೮- ಸರ್ಕಾರಿ ನೌಕರನೇ ಅಲ್ಲದ ವ್ಯಕ್ತಿ ಒಬ್ಬ ತಾಲ್ಲೂಕು ಅಭಿಲೇಖಾಲಯದಲ್ಲಿನ ಸ್ಕ್ಯಾನಿಂಗ್ ವಿಭಾಗದಲ್ಲಿ ಕೆಲಸ ಮಾಡುತಿರುವುದರ ಬಗ್ಗೆ ತನಿಖೆ ಮಾಡಿ ಪರಿಶೀಲನೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚವ್ವೆನಹಳ್ಳಿ ವಿಜಿ ನೇತೃತ್ವದಲ್ಲಿ ಕದಸ ತಾಲ್ಲೂಕು ಸಮಿತಿ ವತಿಯಿಂದ ಜಿಲ್ಲಾ ಸಹಾಯಕ ಕಮಿಷನರ್ ಮೈತ್ರಿ ರವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಸಹಾಯಕ ಕಮಿಷನರ್‌ರವರಿಗೆ ಮನವಿ ಸಲ್ಲಿಸಿದ ನಂತರ ತಾಲ್ಲೂಕು ಸಂಚಾಲಕ ಎಸ್ ಎಂ ವೆಂಕಟೇಶ್ ಪತ್ರಿಕೆ ಹೇಳಿಕೆ ನೀಡಿ ಮಾತನಾಡಿ ತಾಲ್ಲೂಕು ಕಚೇರಿಯ ಅಭಿಲೇಖಾಲಯದಲ್ಲಿ ಸರ್ಕಾರಿ ನೌಕರರನೇ ಅಲ್ಲದ ವ್ಯಕ್ತಿ ಒಬ್ಬ ಸ್ಕ್ಯಾನಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಆತ ನಕಲಿ ದಾಖಲೆಗಳ ಸೃಷ್ಠಿ ಮಾಡಲು ಕಚೇರಿಯಲ್ಲಿ ಕೆಲವು ಅಧಿಕಾರಗಳ ಕುಮ್ಮಕ್ಕುನಿಂದ ಸೇರಿಕೊಂಡು ಸಾರ್ವಜನಿಕ ಕೆಲಸಗಳಿಗೆ ತಡೆ ಮಾಡಿ ಭೂ ಮಾಪಿಯ ಮತ್ತು ಕೆಲವರಿಗೆ ಸರ್ಕಾರಿ ಜಮೀನು ನಕಲಿ ದಾಖಲೆಗಳನ್ನು ಸಿದ್ದಪಡಿಸಲು ಸೇರಿಕೊಂಡಿದ್ದಾನೆ.
ಈ ಕಚೇರಿಯಲ್ಲಿನ ನೈಜ ದಾಖಲೆಗಳು ಮಾಯವಾಗಿ ನಕಲಿ ದಾಖಲೆಗಳು ಸೃಷ್ಠಿಯಾಗುತಿದೆ ಎಂದು ಸಾರ್ವಜನಿಕರ ವಲಯದಲ್ಲಿ ಪ್ರಚಾರವಾಗುತಿದ್ದು, ಆ ವ್ಯಕ್ತಿಯ ಹೆಸರು ಸಿದ್ದಾರ್ಥ್ ಎಂದು ಹೇಳುತ್ತಾರೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾ ಸಹಾಯಕ ಕಮಿಷನರ್ ಮೈತ್ರಿ ಅವರು ಪರಿಶೀಲನೆ ಮಾಡಿ ಆ ವ್ಯಕ್ತಿ ಸರ್ಕಾರಿ, ಅರೆಕಾಲಿಕ, ನೌಕರನೆ ಆಗಿದ್ದಲ್ಲಿ ಯಾವ ಆದೇಶದ ಮೇಲೆ ಕೆಲಸ ಮಾಡುತ್ತಿದ್ದಾನೆ ಯಾವ ಅಧಿಕಾರಿ ಅವರನ್ನು ಕೆಲಸಕ್ಕೆ ನೇಮಿಸಿ ಕೊಂಡಿದ್ದಾರೆ ಎಂಬುದನ್ನು ತನಿಖೆ ಮಾಡಿ ಶಿಸ್ತಿನ ಕ್ರಮಜರಗಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡುವಂತೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಕೆ.ರಮೇಶ್, ಕಂದಾಯ ಇಲಾಖೆ ಅಧಿಕಾರಿಗಳು, ಸಂಘಟಿಕರಾದ ಹಾರೋಹಳ್ಳಿ ಮುನಿರಾಜು, ಗಾಂಧಿ ಸರ್ಕಲ್ ಬಾಬು ಹಾಜರಿದ್ದರು.