ಅಧಿಕಾರಿಗಳಿಂದ ಅನಿರ್ಧಿಷ್ಟಾವಧಿ ಧರಣಿ
ಮಾಲೂರು, ಸೆ. ೨೮- ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಧಿಕ ಕೆಲಸದ ಒತ್ತಡ ತಾಂತ್ರಿಕ ಕೆಲಸಗಳಿಗೆ ಮಾಹಿತಿ ನೀಡದಿರುವುದು ಮೂಲಭೂತ ಸೌಕರ್ಯ ನೀಡದೆ ಒತ್ತಡ ಹೇರಿ ಕೆಲಸ ಮಾಡಿಸುತ್ತಿರುವುದನ್ನು ವಿರೋಧಿಸಿ ಎರಡು ದಿನಗಳ ಕಾಲ ಕೆಲಸವನ್ನು ಸ್ಥಗಿತಗೊಳಿಸಿ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.
ಗ್ರೇಡ್ ೨ ತಹಶೀಲ್ದಾರ್ ಹರಿಪ್ರಸಾದ್ ಅವರ ಮೂಲಕ ಮೂಲಕ ಸರ್ಕಾರಕ್ಕೆ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲ್ಲೂಕು ಶಾಖೆ ಪದಾಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಪಟ್ಟಣದ ಪುರಸಭಾ ಉದ್ಯಾನವನದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಅನಿರ್ದಷ್ಟಾವಧಿ ಧರಣಿ ನಡೆಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಆಡಳಿತ ಅಧಿಕಾರಿಗಳ ತಾಲ್ಲೂಕು ಸಂಘದ ಅಧ್ಯಕ್ಷ ಶರತ್ ಮಾತನಾಡಿ ಕರ್ನಾಟಕ ರಾಜ್ಯಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ೬ ಮೊಬೈಲ್ ಆಪ್‌ಗಳಲ್ಲಿ ಒಂದೇ ಬಾರಿಗೆ ಪ್ರಗತಿ ಸಾಧಿಸುವಂತೆ ಒತ್ತಡ ಹೇರಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಧಿಕ ಕೆಲಸದ ಒತ್ತಡ ಉಂಟಾಗಿದ್ದು, ಅಧಿಕ ಕೆಲಸದ ಒತ್ತಡದಿಂದ ಕೆಲವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಒತ್ತಡ ಹೆಚ್ಚಾಗಿ ಕೆಲವು ಅಧಿಕಾರಿಗಳು ಕೆಲಸಕ್ಕೆ ರಾಜೀನಾಮೆ ಸಲ್ಲಿಸುವ ಹಂತಕ್ಕೆ ತಲುಪಿದ್ದಾರೆ. ಮತ್ತು ಕೆಲವು ಗ್ರಾಮ ಆಡಳಿತ ಅಧಿಕಾರಿಗಳು ಫೀಲ್ಡ್ ವರ್ಕ ಮಾಡಲು ಆಗುತ್ತಿಲ್ಲ ಸೆ.೨೨ ರಂದು ಭಾನುವಾ ರಜಾ ದಿನವಾಗಿದ್ದರೂ ಮೊಬೈಲ್ ಆಫ್ ಪ್ರಗತಿಗೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದರು.ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ ಮುನೇಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಶಿರಸ್ತೆದಾರ್ ಧಮೇಂದ್ರ ಪ್ರಸಾದ್, ಸರ್ಕಾರಿ ನೌಕರ ಸಂಘದ ರಾಜ್ಯ ಪರಿಸರ ಸದಸ್ಯ ವಿನಯ್, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಗೌರವಾಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ರಾಹುಲ್, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಸದಸ್ಯರಾದ ಬಸವರಾಜ್ ಪಿ, ಪ್ರವೀಣ್, ರಾಹುಲ್ ಕೆ, ವೆಂಕಟೇಶ್, ಉಪೇಂದ್ರ, ಬೀರಪ್ಪ, ಪ್ರವೀಣ್, ಶೇಖರ್, ಮಧು, ನೂತನ್, ಪುಂಡರೀಕ್, ಮೇಘನಾಯಕ್, ರಘುವೀರ್, ಬಸವರಾಜ್, ಬಸವರಾಜ್.ಕೆ.ಎಸ್, ದೀಪಕ್, ಸುರೇಶ್, ವಿಜಯಕುಮಾರ್, ಶಿವಕುಮಾರ್, ಹರೀಶ್, ಸ್ವಾತಿ, ಅನಿತಾ, ಮಮತಾ, ಗಂಗಮ್ಮ, ಶಿಲ್ಪ ರಾಣಿ, ವಾಸು, ಪ್ರಿಯ ದರ್ಶಿನಿ, ಲತಾ, ವಂದನಾ, ಮೀನಾ, ವೀಣಾ, ಸುಜಾತ, ದಿವ್ಯ ಹಾಜರಿದ್ದರು.
