ದಿಶಾ ಸಮಿತಿಗೆ ನರಸನಾಯಕ ನೇಮಕ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.28: ಮಂಡ್ಯ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿಯ ( ದಿಶಾ ) ಸದಸ್ಯರಾಗಿ ನಿವೃತ್ತ ಉಪನ್ಯಾಸಕ ಅಕ್ಕಿಹೆಬ್ಬಾಳು ನರಸನಾಯಕ ನೇಮಕಗೊಂಡಿದ್ದಾರೆ.
ಅವರು ಇಂದು ಶಾಸಕ ಹೆಚ್.ಟಿ.ಮಂಜು ರವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಮಾತನಾಡಿ ಹಿಂದುಳಿದ ಸಮುದಾಯದ ಅಸಂಘಟಿತ ಜನವರ್ಗವನ್ನು ಗುರುತಿಸಿ ಶಾಸಕ ಹೆಚ್.ಟಿ.ಮಂಜು ದಿಶಾ ಸಮಿತಿಯ ಸದಸ್ಯರನ್ನಾಗಿಸಿ ಸಮಾಜ ಸೇವೆಗೆ ಅವಕಾಶ ಕಲ್ಪಿಸಿದ್ದಾರೆ. ಶಾಸಕರ ಗೌರವಕ್ಕೆ ಚ್ಯುತಿಯಾಗದಂತೆ ನಾನು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ನನ್ನ ನೇಮಕಕ್ಕೆ ಕಾರಣಕರ್ತರಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಶಾಸಕ ಹೆಚ್.ಟಿ.ಮಂಜು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು,ಮಾಜಿ ಶಾಸಕರಾದ ಸುರೇಶ್ಗೌ ಡ,ರವೀಂದ್ರಶ್ರೀಕಂಠಯ್ಯ,ಜೆಡಿಎಸ್ ಜೊಲ್ಲಾಧ್ಯಕ್ಷ ಡಿ.ರಮೇಶ್ ಹಾಗು ಕಾರಣಕರ್ತರಾದ ಎಲ್ಲಾ ಮುಖಂಡರಿಗು ಕೃತಜ್ಞತೆ ತಿಳಿಸಿದರು.
ಈ ಸಂದರ್ಭದಲ್ಲಿ ಆಲಂಬಾಡಿ ಕಾವಲು ಬಿ.ನಾಗರಾಜು, ಭೈರನಾಯಕ, ನಿವೃತ್ತ ಎ.ಎಸ್.ಐ ಅಕ್ಕಿಹೆಬ್ಬಾಳು ಕೆ.ರಮೇಶ್, ದಡದಹಳ್ಳಿ ಕಾಳನಾಯಕ, ಡಿ.ಬಿ.ಕುಮಾರ, ಲೋಕೇಶ್, ಪ್ರಥಮ ದರ್ಜೆ ಗುತ್ತಿಗೆದಾರ ಎನ್.ಎನ್.ರವಿ, ಡಿ.ಕೆ.ತಮ್ಮಯ್ಯ, ನಾಗರಾಜ ನಾಯಕ, ಸಿಂಗನಹಳ್ಳಿ ಭರತ್, ಪೂವನಹಳ್ಳಿ ರಘು, ಬೊಮ್ಮೇನಹಳ್ಳಿ ಕೃಷ್ಣನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.