ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಚಾಲನೆ
ಬೀದರ:ಜು.15:ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವೆ. ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅತ್ಯುತ್ತಮ ಅಭಿವೃದ್ಧಿಗಾಗಿ ನಿರಂತರ ಪ್ರಯತ್ನ ಮಾಡುತ್ತಿರುವೆ ಎಂದು ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ನಿರ್ಣಾ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನನ್ನ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೆ ಮೂಲ ಸೌಲಭ್ಯಗಳನ್ನು ಒದಗಿಸಲ ಹಗಲಿರುಳು ಶ್ರಮಿಸುತ್ತಿರುವೆ ಗುತ್ತಿಗೆದಾರರು ಗುಣಮಟ್ಟವಾಗಿ ಕಾಮಗಾರಿ ಪೂರ್ಣಗೊಳಿಸಬೇಕು . ನಿಗಧಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳ್ಳಿಸಬೇಕು ಗ್ರಾಮಸ್ಥರು ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕ್ಷೇತ್ರದ ಜನ ನನ್ನನ್ನು ಶಾಸಕನಾಗಲು ಆಶೀರ್ವಾದ ನೀಡಿದ್ದಾರೆ ಅಭಿವೃದ್ಧಿ ನನ್ನ ಮೂಲ ಮಂತ್ರ, ಕ್ಷೇತ್ರದ ಜನರ ಪ್ರೀತಿ-ವಿಶ್ವಾಸ-ನಂಬಿಕೆ ನನಗೆ ಶ್ರೀರಕ್ಷಣೆ ಅವರಿಗಾಗಿ ಹಗಲಿರುಳು ದುಡಿದು ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ನಿರ್ಣಾ ಗ್ರಾಮದಲ್ಲಿ ಬಸ್ ನಿಲ್ದಾಣ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಂಪೌಂಡ್ ವಾಲ್ ಹಾಗೂ ಶೌಚಾಲಯ ನಿರ್ಮಾಣ, ಸರ್ಕಾರಿ ಪ್ರೌಢಶಾಲೆಯಲ್ಲಿ ಬಾಲಕಿಯರಿಗಾಗಿ ಕೊಳವೆ ಬಾವಿ ಸಹಿತ ಶೌಚಾಲಯ ನಿರ್ಮಾಣ, ಎರಡು ಓಣಿಯಲ್ಲಿ ಹೈಮಸ್ಟ್ ಲೈಟ್, ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ಅಂಬಿಗರ ಚೌಡಯ್ಯ ದೇವಸ್ಥಾನದ ಬಳಿ ಸಾಂಸ್ಕøತಿಕ ಭವನ, ಸುಸಜ್ಜಿತ ಅಂಗವಾಡಿ ಕಟ್ಟಡ ನಿರ್ಮಾಣ, ಮಲ್ಲಿಕಾರ್ಜುನ ದೇವಸ್ಥಾನ ಬಳಿ ಶೆಡ್ಡ್ ಸೇರಿ ಸುಮಾರು 1 ಕೋಟಿಗೂ ಹೆಚ್ಚು ಅನುದಾನದ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಿ ಅತ್ಯುತ್ತಮ ಅಭಿವೃದ್ಧಿಗಾಗಿ ನಿರಂತರ ಪ್ರಯತ್ನ ಮಾಡುತ್ತಿರುವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಗ್ರಾಮದ ಮುಖಂಡರಾದ ?ಚನ್ನಬಸಪ್ಪ, ಸೊಪ್ಪಣ್ಣ, ಶ್ರೀನಿವಾಸ್ ಪತ್ತರ್,
ವೀರಶೆಟ್ಟಿ ಭದ್ರಪ್ಪನವರ್ ಮಾಣಿಕಪ್ಪ ಖಾಶೆಂಪುರ, ಡಾ. ರವಿಸ್ವಾಮಿ, ವೀರಯ್ಯಸ್ವಾಮಿ ಕೌಡಿ,ಶಿವಕುಮಾರ್ ಮೈಲೂರು, ವೀರಶೆಟ್ಟಿ ನಾಗವಾರ, ಜಗನ್ನಾಥ ಮಜಗೆ, ಸುರೇಶ ಮಾಶೆಟ್ಟಿ, ಘಾಳೇಪ್ಪ ಚಟ್ಟನಳ್ಳಿ, ಶರಣಪ್ಪ ಖಾಶೆಂಪುರ,ವೀರಬಸಪ್ಪ ಬಿರಾದಾರ, ಜಗನ್ನಾಥ, ವೀರಬಸಪ್ಪ, ಭೀಮರಾವ, ರಮೇಶ್ ಧೂಳ, ಹಮೀದ್, ಶರಣಕುಮಾರ, ಶೇಖರ್ ಪಾಟೀಲ, ರಾಜು ಪಸಾರ, ಸಂತೋಷ ಹಳ್ಳಿಖೇಡ, ಗುರು ಮಠ, ಸಣ್ಮುಕಪ್ಪ, ಸೂರ್ಯಕಾಂತ, ಮಂಜು ಸ್ವಾಮಿ, ಅಪ್ಪು ಸ್ವಾಮಿ ಮಂಜುನಾಥ್ ಬಿಜಾಪುರ, ಮಲ್ಲಯ್ಯ ಸ್ವಾಮಿ, ದೀಲೀಪ್ ಪಸಾರ, ರವಿ ಪಂಚಾಳ ಸುಧಾಕರ್ ಧನ್ನೂರ್ ಗುರು ಚಿದ್ರಿ, ಶಿವು ಮುಸಂಗ, ಮಹೇಶ್,
ಈಶ್ವರ,
ವಿಜಯಕುಮಾರ, ಮತ್ತಿತರರು ಉಪಸ್ಥಿತರಿದ್ದರು