ಶಾಂತಿಯುತ ಮೊಹರಂ ಆಚರಣೆಗೆ ಡಿವೈಎಸ್‍ಪಿ ಗೋಪಿ ಕರೆ
ಆಳಂದ:ಜು.15: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಆಚರಿಸಲಾಗುವ ಮೊಹರಂ ಹಬ್ಬದ ಆಚರಣೆಯನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಆಳಂದ ಅಫಜಲಪೂರ ವಿಭಾಗದ ಡಿವೈಎಸ್‍ಪಿ ಗೋಪಿ ಬಿ.ಆರ್. ಅವರು ಜನತೆಗೆ ಕರೆ ನೀಡಿದರು.
ಪಟ್ಟಣದಲ್ಲಿನ ಡಿವೈಎಸ್‍ಪಿ ಕಚೇರಿಯ ಆವರಣದಲ್ಲಿ ಭಾನುವಾರೆ ಕರೆದ ಆಳಂದ, ನರೋಣಾ, ನಿಂಬರಗಾ ಮತ್ತು ಮಾದನಹಿಪ್ಪರಗಾ ಠಾಣೆ ವ್ಯಾಪ್ತಿಯ ಅನ್ವಿಯಿಸಿ ಕರೆದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲೆಯಲ್ಲಿ ಮೊಹರಂ ಆಚರಣೆ ಮೆರವಣಿಗೆ ಮತ್ತು ಆಚರಣೆ ನಡೆಯುತ್ತದೆ ಎಂಬುದು ಸಮೀತಿಯುವರು ಈ ಕುರಿತು ಠಾಣೆಗಳಿಗೆ ಮಾಹಿತಿ ಒದಗಿಸಿದರೆ ಬಂದೋಬಸ್ತ್‍ಗಾಗಿ ಸಿಬ್ಬಂದಿಗಳನ್ನು ಒದಗಿಸಲಾಗುವುದು. ಸರ್ವ ಧರ್ಮೀಯರು ಸೇರಿ ಎಂದಿನಂತೆ ಸೌಹಾರ್ದತೆಯಿಂದ ಮೊಹರಂ ಆಚರಣೆ ಕೈಗೊಳ್ಳಲು ಇಲಾಖೆಗೆ ಸಹಕರಿಸಬೇಕು ಮತ್ತು ಇಲಾಖೆಯೂ ಶಾಂತಿ ಸುವ್ಯವಸ್ಥೆ ಕಾಪಾಡಲು ಬದ್ಧವಾಗಿದೆ ಎಂದು ಅವರು ಹೇಳಿದರು.
ಆಳಂದ ಠಾಣೆ ವ್ಯಾಪ್ತಿಯ ಪಿಐ ಮಹಾದೇವ ಪಂಚಮುಖಿ, ಮೊಹರಂ ಸಂದರ್ಭದಲ್ಲಿ ಶಾಂತಿಯುತವಾಗಿ ಕಾರ್ಯನಿರ್ವಹಿಸಲು ಎಲ್ಲಾ ಸಮುದಾಯಗಳ ಸಹಕಾರ ಅಗತ್ಯ. ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಅಗತ್ಯ ಕ್ರಮಕ್ಕೆ ಮಾಹಿತಿ ಒದಗಿಸಬೇಕು. ಮೆರವಣಿಗೆ ಮತ್ತು ಆಚರಣೆಯಲ್ಲಿ ವಿದ್ಯುತ್ ಅವಘಡ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಿಡಿಗೇಡಿಗಳ ಮಾಹಿತಿ ನೀಡಿ ಕಾನೂನು ಕೈಗೆತ್ತಿಕೊಂಡರೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮೀಣ ಸಿಪಿಐ ಪ್ರಕಾಶ ಯಾತ್ನೂರ್ ಮಾತನಾಡಿ, ಕಾನೂನು ಪಾಲನೆಗೆ ಸಹಕರಿಸಬೇಕು ಎಂದು ಹೇಳಿದರು.
ನರೋಣಾ ಪಿಎಸ್‍ಐ ಗÀಂಗಮ್ಮ, ಮಾದನಹಿಪ್ಪರಗಾ ಪಿಎಸ್‍ಐ ದಿನೇಶ ಅವರು ಮಾತನಾಡಿ ತಮ್ಮ ವ್ಯಾಪ್ತಿಯಲ್ಲಿ ಮೊಹರಂ ಆಚಣೆಯ ನಿಯಮಗಳ ಪಾಲನೆ ಮತ್ತು ಮುಂಜಾಗೃತೆಗೆ ವಹಿಸಬೇಕಾದ ಕ್ರಮದ ಮಾಹಿತಿಯನ್ನು ಅವರು ಸಭೆಯ ಮುಖಂಡರ ಗಮನಕ್ಕೆ ತಂದರು.
ನಿಂಬರಗಾ ಪಿಎಸ್‍ಐ ಬಸವರಾಜ್, ಆಳಂದ ಠಾಣೆ ಪಿಎಸ್‍ಐ ಭೀಮಾಶಂಕರ ಬಂಕ್ಲಿ ಉಪಸ್ಥಿತರಿದ್ದರು. ಕಂದಾಯ ಇಲಾಖೆ ಸಿಬ್ಬಂದಿ ಮಹಾದೇವ್, ಪುರಸಭೆ ಹಾಗೂ ಜಸ್ಕಾಂ ಸಿಬ್ಬಂದಿಗಳು ಮತ್ತು ಮುಖಂಡ ದಯಾನಂದ್ ಶೇರಿಕಾರಮ, ದಿಲೀಪ ಕ್ಷೀರಸಾಗರ, ಮಲ್ಲಿಕಾರ್ಜುನ ಬೋಳಣಿ, ಪುರಸಭೆ ಸದಸ್ಯ ಶಿವಪುತ್ರ ನಡಿಗೇರಿ, ಸುಲೇಮಾನ್ ಮುಕುಟ್, ನ್ಯಾಯವಾದಿ ಸಂಜಯ ನಾಯಕ್, ಸುಲೇಮಾನ್ ಮುಕುಟ್, ಅಬ್ದುಲ್ ಸತ್ತಾರ ಮುರುಮಕರ್, ಮೋಹಿಜ್ ಕಾರಬಾರಿ, ಅಹ್ಮದ್ ಅಲಿ ಚುಲಬುಲ್, ಖಲಿಲ್ ಅನ್ಸಾರಿ ಸೇರಿದಂತೆ ಆಳಂದ, ನರೋಣಾ, ನಿಂಬರಗಾ ಮತ್ತು ಮತ್ತು ಮಾದನಹಿಪ್ಪರಗಾ ವ್ಯಾಪ್ತಿಯ ಶಾಂತಿ ಸಮಿತಿಯ ಸದಸ್ಯರು ಪಾಲ್ಗೊಂಡು ಮುಂಜಾಗೃತೆ ಕ್ರಮದ ಕುರಿತು ಅಧಿಕಾರಿಗಳ ಬಳಿ ಪ್ರಸ್ತಾಪಿಸಿದರು.
ಶಾಂತಿ ಸಮಿತಿಯ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ಅಧಿಕಾರಿಗಳ ಸೂಚನೆಗಳನ್ನು ಆಲಿಸಿದರು ಮತ್ತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅಲ್ಲದೆ, ಈ ಸಭೆಯಲ್ಲಿ, ಮೊಹರಣ ಆಚರಣೆ ಸಂದರ್ಭದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ಹಂಚಿಕೊಂಡು, ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.