ಜನರ ಸೇವೆಗೆ ಎಸಿಸಿ ಸದಾ ಬದ್ದ: ನಿತಿನ್
ವಾಡಿ:ಜು.15: ದೇಶದಲ್ಲಿ ಎಷ್ಟೋ ಜನರಿಗೆ ಉದ್ಯೋಗ, ಗ್ರಾಮಗಳ ಅಭಿವೃದ್ಧಿ, ಹಲವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ಉದ್ಯೋಗದ ತರಬೇತಿ ಸೇರಿದಂತೆ ಹಲವು ಯೋಜನೆಗಳು ನೀಡುವ ಮೂಲಕ ಎಸಿಸಿ ಅದಾನಿ ಫೌಂಡೇಶನ್ ಜನರ ಭಾವನೆಗಳಿಗೆ ಸ್ಪಂದಿಸುತ್ತಿದೆ ಎಂದು ಎಸಿಸಿ ಕಾರ್ಖಾನೆಯ ಸಿಎಸ್ ಆರ್ ವಿಭಾಗದ ವ್ಯವಹಾರಗಳ ನಿರ್ದೇಶಕ ನಿತಿನ್ ಹಿರಾಚಂದ್ ಶಿರಾಳ್ಕರ್ ಹೇಳಿದರು.
ಪಟ್ಟಣದ ವಾರ್ಡ್ ನಂ.22ರ ವಿಜಯನಗರ ಬಡಾವಣೆಯಲ್ಲಿ ಸಿಎಸ್ ಆರ್ ಯೋಜನೆಯ 4ಲಕ್ಚ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾದ ಆರೋಗ್ಯ ಕ್ಷೇಮ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಡಾವಣೆಯ ಜನರ ಆರೋಗ್ಯ ದೃಷ್ಟಿಯಿಂದ ಈ ಆರೋಗ್ಯ ಕೇಂದ್ರದ ಅವಶ್ಯಕತೆ ಇತ್ತು. ಸ್ಥಳೀಯರ ಬೇಡಿಕೆಗೆ ಸ್ಪಂದಿಸುವ ಮೂಲಕ ಎಸಿಸಿ ಆಡಳಿತ ಮಂಡಳಿ ಸಹಕರಿಸಿದೆ ಎಂದರು.
ಇದೇ ವೇಳೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ.ಸಂತೋಷ ಅಲಗೂರ, ಸ್ಲಂ ಬಡಾವಣೆಯ ನಿವಾಸಿಗಳ ಜನರ ಆರೋಗ್ಯ ತಪಾಸಣೆ, ಗರ್ಭಿಣಿ ಮತ್ತು ಮಕ್ಕಳ ತಪಾಸಣೆಗಾಗಿ ಬರುವ ಆರೋಗ್ಯ ಸಹಾಯಕಿರಿಗೆ ಸೂಕ್ತವಾದ ಜಾಗದ ಕೊರತೆ ಇತ್ತು. ಈ ಪಾಳು ಬಿದ್ದ ಕಟ್ಟಡವನ್ನು ಗುರುತಿಸಿ ಆರೋಗ್ಯ ಜೀರ್ಣೋದ್ಧಾರಗೊಳಿಸಿ ಅಗತ್ಯ ಪೀಠೋಪಕರಣ ಹಾಗೂ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಒದಗಿಸಿ ಅನುಕೂಲ ಮಾಡಿದಾರೆ. ಅದಾನಿ ಫೌಂಡೇಶನ್ ತೋರಿರುವ ಜನರ ಆರೋಗ್ಯ ಕಾಳಜಿ ಮೆಚ್ಚುವಂತದು ಎಂದರು.
ಪುರಸಭೆ ಮುಖ್ಯಾಧಿಕಾರಿ ಸಿ.ಫಕೃದ್ದೀನ್ ಸಾಬ್, ಎಸಿಸಿ ಕಾರ್ಖಾನೆಯ ಕ್ಲಸ್ಟರ್ ವಿಭಾಗದ ಮುಖ್ಯಸ್ಥ ಪರಾಗ್ ಶ್ರಿವಾಸ್ತಾವ, ಎಚ್ ಆರ್ ವಿಭಾಗದ ಮುಖ್ಯಸ್ಥ ಎಡ್ಡು ಕೋಟೇಶ್ವರ ರಾವ್ ಸಭೆ ಉದ್ದೇಶಿಸಿ ಮಾತನಾಡಿದರು.
ಸಿಎಸ್ ಆರ್ ವಿಭಾಗದ ಮುಖ್ಯಸ್ಥ ವೀರೇಶ ಎಮ್, ಸಹಾಯಕ ವ್ಯವಸ್ಥಾಪಕ ಜಗದೀಶ್ ರಾಠೋಡ, ಸರಕಾರಿ ಶಾಲೆಯ ಮುಖ್ಯಶಿಕ್ಷಕ ಅಮಿನುದ್ದಿನ್ ಸಾಬ್. ಮಾದಿಗ ದಂಡೋರ ಹೋರಾಟ ಸಮಿತಿ ಅಧ್ಯಕ್ಷ ಜಗದೀಶ್ ಮುಕ್ಕನಾಳ್, ಮಾದಿಗ ಸಮಾಜ ಮಾಜಿ ಅಧ್ಯಕ್ಷ ಬಸವರಾಜ ಕಾಟ್ಟಮಳಿ, ಮುಖಂಡರಾದ ಮಲ್ಲಿಕಾರ್ಜುನ ಸೈದಾಪುರ, ಬಸವರಾಜ ಕೂಡ್ಲೂರಕರ್, ಹಣಮಂತ ಕಡಮಗೇರಿ, ಹಾಜಪ್ಪ ಲಾಡ್ಲಾಪುರ, ಪರಶುರಾಮ ಕಟ್ಟಿಮನಿ, ಅಬ್ರಾಹಂ ರಾಜಣ್ಣ, ಬಾಬುಮಿಯ್ಯ, ಗೋಪಾಲ ಸೇರಿದಂತೆ ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆ ಹಾಗೂ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.