ಮಹಿಳೆಯರ ಬರ್ಬರ ಹತ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮನವಿ
ಕಲಬುರಗಿ:ಜು.15: ನಗರದ ಹೊರ ವಲಯದ ತಾವರಗೇರಾ ಕ್ರಾಸ್ ಹತ್ತಿರ ಏಪ್ರೀಲ್ 07 ರಂದು ಕೂಲಿ ಕಾರ್ಮಿಕರಾಗಿರುವ ಇಬ್ಬರ ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿ ಕೊಲೆ ಮಾಡಿ 03 ತಿಂಗಳು ಕಳೆದರು ಕೂಡ ಇಲ್ಲಿಯವರೆಗೆ ಆರೋಪಿಗಳನ್ನು ಬಂದಿಸಿರುವುದಿಲ್ಲ. ಆದ್ದರಿಂದ ಕೂಡಲೇ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣವಾದ ಕಾನೂನು ಕ್ರಮ ಕೈಗೋಳ್ಳಬೇಕೆಂದು ಕಲ್ಯಾಣ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕೆರಮಗಿ ಅವರು ಪೆÇೀಲಿಸ್ ಮಹಾ ನಿರ್ದೇಶಕರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
ಶರಣಮ್ಮ ಗಂಡ ಅಣ್ಣಾರಾವ ವಯಸ್ಸು: 54 ಸಾ: ಕೆರಿ ಅಂಬಲಗಾ ಗ್ರಾಮ, ಮತ್ತು ಚಂದಮ್ಮ ಗಂಡ ಬಾಬುರಾವ ವಯಸ್ಸು: 55 ಸಾ: ತಾಜ ಸುಲ್ತಾನಪೂರ ಇವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಮತ್ತು ಆರ್ಥಿಕವಾಗಿ ಬಡ ಕುಟುಂಬದವರಾಗಿದ್ದು, ದಿನನಿತ್ಯ ತಮ್ಮ ಕುಟುಂಬ ನಿರ್ವಹಣೆಗಾಗಿ ಗುಲಬರ್ಗಾ ನಗರದ ಗಂಜ ಬಸ್ಟಾಂಡ್ ಮಿಂಚಗೋರಿ ನಾಕಾ ಹತ್ತಿರ ದಿನಾಲು ಕೂಲಿ ಕೆಲಸಕ್ಕಾಗಿ ಬರುತ್ತಿದ್ದರು. ಅಲ್ಲಿದ್ದ ಗುತ್ತಿಗೆದಾರರು ಕೆಲಸಕ್ಕೆ ಕರೆದುಕೊಂಡು ಹೊಗುವವರು ಬಂದು ಅವರು ಕೆಲಸ ಮಾಡಿ ದಿನನಿತ್ಯ ಮನೆಗೆ ಹೋಗುತ್ತಿದ್ದರು. ದಿನಾಂಕ: 07-04-2024 ರಂದು ಬೆಳಿಗ್ಗೆ: 8.30 ಕ್ಕೆ ಕೂಲಿ ಕೆಲಸಕ್ಕೆ ಎಂದು ಸದರಿ ನಾಕದಲ್ಲಿ ಬಂದು ದಿನನಿತ್ಯ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ನಂತರ ಸುಮಾರು 10.00 ಗಂಟೆಗೆ ತಾವರಗೇರಾ ಕ್ರಾಸ್ ಹತ್ತಿರ ಜಮೀನೊಂದರಲ್ಲಿ ಇವರಿಬ್ಬರಿಗೆ ಯಾರೋ ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ. ಕಲಬುರಗಿ ಜಿಲ್ಲೆಯ ಹಾಡು-ಹಗಲೆ ದಿನನಿತ್ಯ ಕೊಲೆಗಳು ಆಗುತಿದ್ದರು. ಕೊಲೆಗಳು ಆಗಿ 03 ತಿಂಗಳು ಕಳೆದರೂ ಕೂಡ ಸದರಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೆÇೀಲಿಸ್ ಇಲಾಖೆಯವರು ಸದರಿ ಆರೋಪಿಗಳನ್ನು ಪತ್ತೆ ಹಚ್ಚಿನ ಬಂದಿಸಲು ಸಂಪೂರ್ಣವಾಗಿ ವಿಫಲವಾಗಿರುತ್ತದೆ.
ಆದಕಾರಣ ತಾವುಗಳು ಕಲಬುರಗಿ ಜಿಲ್ಲೆಯ ಸಮಿಪದಲ್ಲಿರುವ ತಾವರಗೇರಾ ಕ್ರಾಸ್ ಹತ್ತಿರ ಇಬ್ಬರ ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಗುರಣ್ಣ ಐನಾಪುರ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಶಿವಶಂಕರ ಕಮಲಪೂರ್, ತಾಲೂಕ ಅಧ್ಯಕ್ಷ ಶ್ರೀನಿವಾಸ್ ಕೆಂಚೆ ಇತರರು ಉಪಸ್ಥಿತರಿದ್ದರು.