ಜೀವನದ ಭದ್ರತೆ, ಸ್ವಾವಲಂಬನೆಗೆ ಕೌಶಲಗಳು ಅಗತ್ಯ
ಕಲಬುರಗಿ:ಜು.15:ಇಂದಿನ ಯುವಕರು ಕೇವಲ ಪದವಿ, ಪ್ರಮಾಣಪತ್ರ ಪಡೆದರೆ ಸಾಲದು. ಜೊತೆಗೆವಿಷಯದಜ್ಞಾನವನ್ನುಕಾರ್ಯರೂಪದಲ್ಲಿತರುವ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು.ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ ಮತ್ತುಸ್ವಯಂಉದ್ಯೋಗ ಮಾಡಲುಕೌಶಲಗಳು ಅಗತ್ಯವಾಗಿವೆ. ಕೌಶಲಗಳ ಅಳವಡಿಕೆಯಿಂದ ಜೀವನದ ಭದ್ರೆತ ಸಾಧ್ಯವಾಗುತ್ತದೆಎಂದುಅರ್ಥಶಾಸ್ತ್ರಉಪನ್ಯಾಸಕಎಚ್.ಬಿ.ಪಾಟೀಲ ಹೇಳಿದರು.
ನಗರದನ್ಯೂರಾಘವೇಂದ್ರ ಕಾಲನಿಯಲ್ಲಿರುವ ‘ಮುತ್ತಾಟ್ಯುಟೋರಿಯಲ್ಸ್’ನಲ್ಲಿ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಜರುಗಿದ’ವಿಶ್ವಯುವ ಕೌಶಲ ದಿನಾಚರಣೆ’ಯಕಾರ್ಯಕ್ರಮವನ್ನು ಉದ್ಘಾಟಿಸಿ ಅವರುಮಾತನಾಡುತ್ತಿದ್ದರು.
ಪದವಿ ಪಡೆದಿದ್ದೇವೆಯೆಂದುಎಲ್ಲರಿಗೂ ಸರ್ಕಾರಿ ನೌಕರಿದೊರೆಯುವುದಿಲ್ಲ. ಯುವಕರು ಸರ್ಕಾರಿ ನೌಕರಿಯ ಮೇಲೆಯೇ ಅವಲಂಬನೆ ಬೇಡ. ಉದ್ಯೋಗದ ಕೌಶಲಗಳನ್ನು ಅಳವಡಿಸಿಕೊಂಡು ಖಾಸಗಿ ಕ್ಷೇತ್ರ ಮತ್ತುಉದ್ಯೋಗದಾತರಾರುವ ಮೂಲಕ ನಿರುದ್ಯೋಗ ಸಮಸ್ಯೆ ಹೋಗಲಾಡಿಸಬಹುದಾಗಿದೆ. ಸರ್ಕಾರದ ಕೌಶಲಗಳಅಭವೃದ್ಧಿ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಯುವಕರು ಪರಿಣಿತರಿಂದ ಹೊಸ-ಹೊಸ ಕೌಶಲಗಳನ್ನು ತಿಳಿದುಕೊಂಡು ಅವುಗಳನ್ನುಅಳವಡಿಸಿಕೊಳ್ಳಬೇಕು ಎಂದರು. ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ, ಬಳಗದ ಉಪಾಧಕ್ಷ ನರಸಪ್ಪಬಿರಾದಾರದೇಗಾಂವ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.