ಹಿರಿಯೂರು : ಮೊಹರಂ ಶಾಂತಿ ಸಭೆ
ಸಂಜೆವಾಣಿ ವಾರ್ತೆ
ಹಿರಿಯೂರು ಜು. 15 – ಹಿರಿಯೂರಿನ ಇಮಾಂ ಬಾಡ  ಆಶುಖಾನ ಕಮಿಟಿ ವತಿಯಿಂದ ನೇಕ್ ಬೀಬಿ ದರ್ಗಾ ಬಳಿ  ನಡೆಯುತ್ತಿರುವ ಪೀರ್ಲು ದೇವರ ದೇವಾಲಯದಲ್ಲಿ ಮೊಹರಂ ಶಾಂತಿ ಸಭೆಯನ್ನು ಪೊಲೀಸ್ ಇಲಾಖೆ ವತಿಯಿಂದ ಕರೆಯಲಾಗಿತ್ತು. ಈ ಶಾಂತಿ ಸಭೆಯಲ್ಲಿ ನಗರ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆಯವರು ಭಾಗವಹಿಸಿ ಮಾತನಾಡಿ ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಮೊಹರಂ ಪೂಜೆಗಳನ್ನು ಮತ್ತು ಮೆರವಣಿಗೆಗಳನ್ನು ಶ್ರದ್ಧಾ ಭಕ್ತಿಯಿಂದ  ಶಾಂತ ರೀತಿಯಿಂದ ಆಚರಿಸಿ ಎಂದು  ಸಾರ್ವಜನಿಕರಿಗೆ ಮನವಿ ಮಾಡಿದರು. ಇಮಾಂ ಬಾಡ ಆಶುಖಾನ ಕಮಿಟಿ ಅಧ್ಯಕ್ಷರಾದ ಅಬ್ದುಲ್ ಅಜೀಜ್  ಮಾತನಾಡಿ ಇದೇ 16 ರಂದು ದೊಡ್ಡ ಕೆಂಡದ ಉತ್ಸವ ಇರುತ್ತದೆ 17 ರಂದು ಸಂಜೆ ಮೆರವಣಿಗೆ ಇರುತ್ತದೆ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಾಂತ ರೀತಿಯಿಂದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ತಮ್ಮ ಮನೋ ಇಚ್ಛೆಯಂತೆ ನಿಮ್ಮ ಹರಕೆಗಳನ್ನು ಮತ್ತು ಪೂಜೆಗಳನ್ನು ಬಕ್ತಿ ಭಾವದಿಂದ ಸಲ್ಲಿಸಿ ಎಂದು ಮನವಿ ಮಾಡಿದರು.  ಕಾಂಗ್ರೆಸ್ ಮುಖಂಡರಾದ ಪಿ.ಎಸ್ ಸಾದತ್ ಉಲ್ಲ, ಚಮನ್ ಸಾಬ್, ಶಫಿವುಲ್ಲಾ ಹಾಗೂ ಸಮಿತಿಯ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.