ಮಾಜಿ ಜಿ.ಪಂ. ಸದಸ್ಯ ಸಿದ್ದಾರ್ಥ ಬಸರಿಗಿಡ ಅವರಿಗೆ “ಶಂಕರನಾಗ್” ಪ್ರಶಸ್ತಿ
ಅಫಜಲಪುರ ;ಜು.15: ತಾಲ್ಲೂಕಿನ ಬಡದಾಳ ಜಿಲ್ಲಾ ಪಂಚಾಯತ ಮಾಜಿ ಸದಸ್ಯರು, ಸಮಾಜ ಸೇವಕರು ಹಾಗೂ ನ್ಯಾಯವಾದಿಗಳಾದ ಸಿದ್ಧಾರ್ಥ ಬಸರಿಗಿಡ ಅವರಿಗೆ ಬೆಂಗಳೂರಿನ ಆಟೋರಾಜ ಶಂಕರನಾಗ ಅಭಿಮಾನಿಗಳ ಸಂಘದ ವತಿಯಿಂದ ಕೊಡಮಾಡುವ ವಾರ್ಷಿಕ ” ಶಂಕರನಾಗ ಪ್ರಶಸ್ತಿ ” ನೀಡಿ ಗೌರವಿಸಲಾಯಿತು.
ಭಾನುವಾರ ಬೆಂಗಳೂರಿನ ಲಿಲಾದ್ರಿ ಕಲಾಮಂದಿರದಲ್ಲಿ ಶಂಕರನಾಗ ಅಭಿಮಾನಿಗಳ ಸಂಘದ ವತಿಯಿಂದ ಪ್ರತಿ ವರ್ಷ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಗೌರವಿಸುತ್ತಿದ್ದಾರೆ.
ಈ ವರ್ಷ ಕಾಂಗ್ರೆಸ್ ಮುಖಂಡರು ಹಾಗೂ ಬಡದಾಳ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮದ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸಿ ಕ್ಷೇತ್ರದ ಜನರ ಮನಸ್ಸಲ್ಲಿ ಜನಾನುರಾಗಿವುದರ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಿದ್ದಾರ್ಥ ಬಸರಿಗಿಡ ಅವರಿಗೆ ಲಭಿಸಿದೆ.
ರಾಜಕೀಯ ಯಾವುದೇ ಅಧಿಕಾರ ಇಲ್ಲದಿದ್ದರು ಸಹ ಸರ್ವ ಸಮುದಾಯದವರ ಜೊತೆಗೆ ಉತ್ತಮ ಬಾಂಧವ್ಯದೊಂದಿಗೆ. ಎಲ್ಲರ ಕಷ್ಟ, ಸುಖಗಳಲ್ಲಿ ಭಾಗಿಯಾಗುವ ಮೂಲಕ ಸರಳವಾಗಿ ಜೀವನ ನಡೆಸುತ್ತಿದ್ದಾರೆ. ಇವರು ಮಾಡುತ್ತಿರುವ ಸೇವೆಯನ್ನು ಗುರುತಿಸಿ ಶಂಕರನಾಗ ಅಭಿಮಾನಿಗಳ ಸಂಘಟನೆಯ ಪದಾಧಿಕಾರಿಗಳು ಈ ವರ್ಷದ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿ ಸತ್ಕರಿಸುವ ಮೂಲಕ ಒಬ್ಬ ನಿಷ್ಠಾವಂತ ಸಮಾಜ ಸೇವೆಕನಿಗೆ ಗೌರವ ಸಲ್ಲಿಸಿದ್ದಾರೆ.
ಬಸರಿಗಿಡ ಅವರಿಗೆ ಪ್ರಶಸ್ತಿ ಲಭಿಸಿದ ವಿಷಯ ತಿಳಿದ ಶಾಸಕ ಎಂ.ವೈ. ಪಾಟೀಲ ಹಾಗೂ ಕೆಪಿಸಿಸಿ ಸದಸ್ಯರು ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಮಂಡಳಿ ನಿರ್ದೇಶಕರಾದ ಅರುಣಕುಮಾರ ಎಂ. ವೈ.ಪಾಟೀಲ ಅವರು ಕರೆ ಮಾಡಿ ತಾವು ಮಾಡುತ್ತಿರುವ ಸಮಾಜ ಸೇವೆಗೆ ಇನ್ನಷ್ಟು ಪ್ರಶಸ್ತಿಗಳನ್ನು ಲಭಿಸಲೆಂದು ಅಭಿನಂದನೆಗಳು ತಿಳಿಸುವ ಮೂಲಕ ಶುಭ ಕೋರಿದ್ದಾರೆ.