ಮುಸ್ಲಿಂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಸಂಜೆವಾಣಿ ವಾರ್ತೆ
ಹೊಸಪೇಟೆ ಜು15: ನಗರದ ಅಂಜುಮನ್ ಶಾದಿಮಹಲ್ ನಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ವತಿಯಿಂದ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್‍ಸಿಯಲ್ಲಿ ಶೇ. 85ರಷ್ಟು ಅಂಕಗಳೊಂದಿಗೆ ಪಾಸಾದ ವಿದ್ಯಾರ್ಥಿಗಳನ್ನು ಭಾನುವಾರ ಸನ್ಮಾನಿಸಲಾಯಿತು.
ಅಂಜುಮನ್ ಕಮಿಟಿ ಹಾಗೂ ಹುಡಾ ಅಧ್ಯಕ್ಷ ಎಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಮೊದಲನೇ ಸಂದೇಶವೇ ವಿದ್ಯಾಭ್ಯಾಸವಾಗಿರುತ್ತದೆ. ವಿದ್ಯಾಭ್ಯಾಸಕ್ಕಾಗಿ ಪ್ರಪಂಚದ ಯಾವುದೇ ಮೂಲೆಗೆ ಬೇಕಾದರೂ ಹೋಗಿ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಆದೇಶ ಮಾಡಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಧರ್ಮದ ಜ್ಞಾನದ ಜೊತೆಗೆ ಪ್ರಾಪಂಚಿಕ ಜ್ಞಾನವನ್ನು ಸಹ ಮುಖ್ಯವಾಗಿ ಕಲಿಯಬೇಕಾಗಿರುತ್ತದೆ. ಉತ್ತಮ ವಿದ್ಯಾಭ್ಯಾಸವನ್ನು ಹೊಂದಿದಾಗ ಮಾತ್ರ ಐಎಎಸ್, ಐಪಿಎಸ್ ಹುದ್ದೆ ಪಡೆಯಲು ಸಾಧ್ಯ, ಪೊಲೀಸ್ ಅಧಿಕಾರಿ, ಜಿಲ್ಲಾಧಿಕಾರಿ, ಡಾಕ್ಟರ್, ಎಂಜಿನಿಯರ್ ಗಳಾಗಿ ಕರ್ತವ್ಯ ನಿರ್ವಹಿಸಲು ಸಮಾಜದಲ್ಲಿ ಸೇವೆಯನ್ನು ನೀಡಲು ಸಾಧ್ಯವಾಗಲಿದೆ ಎಂದರು.
ಮುಸ್ಲಿಂ ಧರ್ಮ ಗುರುಗಳಾದ ಮೆಹಬೂಬ್ ಪೀರ ಸಾಬ್, ಅಂಜುಮನ್ ಕಮಿಟಿಯ ಉಪಾಧ್ಯಕ್ಷ ಎಮ್.ಎಮ್. ಫೈರೋಜ್ ಖಾನ್, ಕಾರ್ಯದರ್ಶಿ ಅಬೂಬಕ್ಕರ್ ಅಶ್ರಫಿ, ಖಜಾಂಚಿ ಅನ್ಸರ್ ಬಾಷ, ಜಂಟಿ ಕಾರ್ಯದರ್ಶಿ ಡಾ.ದುರ್ವೆಶ್ ಮೈನುದ್ದೀನ್, ಸದ್ಯಸರಾದ ಸದ್ದಾಮ್ ಹುಸೇನ್, ಮೊಹಮ್ಮದ್ ಮೋಸಿನ್, ಗುಲಾಮ್ ರಸೂಲ್, ಖದೀರ್, ಮನ್ಸೂರ್, ವಿಜಯನಗರ ಜಿಲ್ಲೆಯ ವಕ್ಫ್ ಬೋರ್ಡ್ ಅಧ್ಯಕ್ಷ ದಾದಾಪೀರ್, ಮುಖಂಡರಾದ ಎಸ್.ಎಸ್.ಕೆ ವಲಿಸಾಬ್, ಫೈರೋಜ್ ಪಿರಾ ಸಾಬ್, ಜಾವೇದ್, ತಯ್ಯಬ್, ರಫೀಕ್, ಹಬೀಬುಲ್ಲ, ವಾಹಿದ್, ಕಲಾಂಸಾಬ್, ಹುಸೇನ್ ಸಾಬ್, ರಫೀಕ್, ಖಾದರ್ ಸಾಬ್ ಇತರರು ಪಾಲ್ಗೊಂಡಿದ್ದರು.