ಶೈಕ್ಷಣಿಕ ಜ್ಞಾನದಿಂದ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ: ಸಾಹಿತಿ ಮೇಟಿ ಕೊಟ್ರಪ್ಪ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ ಜು.15 ವಿದ್ಯಾರ್ಥಿಗಳು ಶೈಕ್ಷಣಿಕ ಜ್ಞಾನದಿಂದ ಸಂಘಟನೆ ಮತ್ತು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಸಾಹಿತಿ ಮೇರಿ ಕೊಟ್ರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಆಯೋಜಿಸಿದ್ದ 6ನೇ ತಾಲೂಕ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಮಾಜಿಕವಾಗಿ ಕಾಳಜಿಯನ್ನು ಒಳಗೊಂಡ ಎಡಪಂಥಿಯ ಸಂಘಟನೆಗಳನ್ನ ವೈಚಾರಿಕವಾಗಿ ಅಧ್ಯಯನ ಮಾಡಿಬೇಕು, ವಿದ್ಯಾರ್ಥಿ ಸಂಘಟನೆಗಳು ಪಠ್ಯೇತರ ವಿಷಯಗಳನ್ನು ದೇಶದ ಎಡ , ಬಲ ಚಿಂತನೆ, ರಾಜಕೀಯ , ಶೈಕ್ಷಣಿಕ , ಸಮಾಜಿಕ ದೃಷ್ಟಿಯನ್ನು ತೋರಿಸುತವೆ , ಆದರೆ ವೈಚಾರಿಕ ದೃಷ್ಟಿಕೋನದಿಂದ ಅಧ್ಯಯನದ ನಂತರದಲ್ಲಿ ಅದನ್ನು ಜಾರಿಗೊಳಿಸಿದಾಗ ದೇಶದ ಅಭಿವೃದ್ಧಿ ಮತ್ತು ಸಮೃದ್ಧಿಗೆ ದೊಡ್ಡಮಟ್ಟದ ಅನುಕೂಲಗಳಾಗುತ್ತವೆ ಎಂದರು.
  ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುರಕಡ್ಲಿ ಶಿವಕುಮಾರ್  ಮಾತನಾಡಿ  ವಿದ್ಯಾರ್ಥಿಗಳು ರೈತರ, ಬಡಜನರ , ಯುವಕರ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಅಧ್ಯಯನವನ್ನು ನಡೆಸಬೇಕು ಪುಸ್ತಕಗಳನ್ನು ಓದಬೇಕು ಕುವೆಂಪು, ಬಸವಣ್ಣ , ಚೆಗುವೆರ,  ಅಂಬೇಡ್ಕರ್, ಬುದ್ಧರ ಚಿಂತನೆಗಳ ಪುಸ್ತಕಗಳನ್ನ ಹೆಚ್ಚು ಹೆಚ್ಚು ಅಧ್ಯಯನ ಮಾಡಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು  ಎಂದರು.
ಕಾರ್ಯಕ್ರಮ  ಉದ್ಘಾಟನೆಯನ್ನು ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷ  ದೊಡ್ಡ ಬಸವರಾಜ್  ನೆರವೇರಿಸಿ ಮಾತನಾಡಿ ದೇಶದಲ್ಲಿ ಶೈಕ್ಷಣಿಕ ವರ್ಷ ಅನೇಕ ಸಮಸ್ಯೆಗಳಿಂದ ಕೂಡಿದ್ದು ರಾಜ್ಯದಲ್ಲಿ ಜಿಲ್ಲೆಯಲ್ಲಿ ಡೊನೇಷನ್ ನಂತಹ ಭ್ರಷ್ಟಾಚಾರ, ಹಾಸ್ಟೆಲ್ ಮೂಲಭೂತ ಸೌಲಭ್ಯಗಳನ್ನ ರಾಜ್ಯದಲ್ಲೇ ಕಾಣುತ್ತಿರುವುದನ್ನು ಎಸ್ ಎಫ್ ಐ ಗಮನಿಸಿತಲೇ ಬಂದಿದೆ, ರಾಷ್ಟ್ರಮಟ್ಟದಲ್ಲಿ ಮೆಡಿಕಲ್ ನೀಟ್ ಮತ್ತು ನೆಟ್ ಎಕ್ಸಾಮ್ ನಂತಹ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗುತ್ತಿರುವುದು ಅದನ್ನು ತಿಳಿದಿದ್ದು ಉನ್ನತ ಶಿಕ್ಷಣ ಇಲಾಖೆಗಳು ಶಿಕ್ಷಣ ಸಚಿವರು ಸರ್ಕಾರಗಳು ಮೌನವರಿಸಿರುವುದು ನಿಜಕ್ಕೂ ಖಂಡನೀಯ  ಎಂದರು.
 , ಪ್ರಾಸ್ತಾವಿಕವಾಗಿ ಜಯಸೂರ್ಯ ಮಾತನಾಡಿದರು.ಸಮ್ಮೇಳನವನ್ನು ಉದ್ದೇಶಿಸಿ ಮಾಜಿ ಎಸ್ ಎಫ್ ಐ ಅನಂತ್ ಕುಮಾರ್, ಪರಿಸರ ಪ್ರೇಮಿಗಳದ ಗಣೇಶ್ ಹವಲ್ದಾರ್, ಜನವಾದಿ ಮಹಿಳ ಸಂಘಟನೆಯ ವಿನೋದ ಮತ್ತು ರಾಜ್ಯ ಸಮಿತಿ ಸದಸ್ಯರಾದ ಪೂಜ  ಮಾತನಾಡಿದರು