ಕನ್ನಡ ತಾಯಿ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.
ಸಂಜೆವಾಣಿ ವಾರ್ತೆ
ಜಗಳೂರು.ಜು.೧೫ -:  ಕನ್ನಡ ತಾಯಿ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಜಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಅಭಿಪ್ರಾಯ ಪಟ್ಟರು.ಪಟ್ಟಣದ ವಾಲ್ಮೀಕಿ ಭವನದಲ್ಲಿ ನಮ್ಮ ಕರ್ನಾಟಕ ಸೇನೆ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಕನ್ನಡ ನೆಲೆ ಜಲ ನಾಡು.ನುಡಿ, ಕನ್ನಡ ರಕ್ಷಣೆ ಮಾಡುವ ಜವಾಬ್ದಾರಿ ಸಂಘಟನೆ ಮಾತ್ರವಲ್ಲ ಕನ್ನಡ ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕಿವಿ ಮಾತು ಹೇಳಿ ದರು.ಕನ್ನಡ ಭಾಷೆಗೆ 5 ಸಾವಿರ ವರ್ಷಗಳ ಇತಿಹಾಸವಿ ದ್ದು, ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿವೆ. ಕನ್ನಡ ಭಾಷೆಗೆ ವಿಶಿಷ್ಟವಾದ ಭಾವನೆಗಳಿವೆ ಅನ್ಯ ಭಾಷೆಗಳಿ ಗಿಂತ ಕನ್ನಡ ಭಾಷೆ ಸುಲಲಿತವಾಗಿದೆ, ಅನ್ಯ ಬಾಷೆ ಮೇಲೆ ಪ್ರೀತಿ ಇರಲಿ ವ್ಯಾಮೋಹ ಬೇಡ ಎಂದರು.ತಾಲೂಕಿನಲ್ಲಿ ನಮ್ಮ ಕರ್ನಾಟಕ ಸೇನೆ ಸಂಘಟನೆ ಉದಯವಾಗಿದ್ದು, ಸಂಘಟನೆ ಹುಟ್ಟಿ ಹಾಕುವುದು ದೊಡ್ಡದಲ್ಲ, ಸಂಘಟನೆ ಕೊನೆಯವರೆಗೂ ಅಲ್ಲದೆ ಮುಂದಿನ ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವಂತೆ ಸಂಘಟನೆ ಮಾಡಿ ಸಂಘದ ಮೂಲಕ ಕನ್ನಡ ರಕ್ಷಣೆ ಮಾಡಬೇಕು ಎಂದರು.ಕೆಪಿಸಿಸಿ ಎಸ್ಟಿ ಘಟಕದ ರಾಜಾಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ,ಕನ್ನಡದ ನೆಲ, ಜಲ ಉಳಿಸುವ ಕೆಲಸಗಳು ಚಿಕ್ಕ ವಯಸ್ಸಿನಲ್ಲಿಯೇ ಮೈಗೊಡಿಸಿಕೊಳ್ಳಬೇಕು ಅಲ್ಲದೇ ಕನ್ನಡವನ್ನು ರಕ್ಷಣೆ ಮಾಡಲು ರಾಜಕೀಯ ವ್ಯಕ್ತಿಗಳು ಮುಂದಾಗುತ್ತಿಲ್ಲ, ಆದರೆ ಇಂತಹ ಸಂಘಟನೆಗಳ ಬೆನ್ನಿಗೆ ನಿಂತು ರಕ್ಷಣೆ ಮಾಡುವ ಕೆಲಸವಾಗಬೇಕು ಎಂದರು