ರಾಗರಂಗ್ ಮಾಸಿಕ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.15: ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಬಳ್ಳಾರಿ ವತಿಯಿಂದ ಹಾವಂ ಬಾವಿ ವಿರಾಟ್ ನಗರದ ಗಾನಯೋಗಿ ಕಲಾ ಕೇಂದ್ರದಲ್ಲಿ 43ನೇ ರಾಗರಂಗ್ ಮಾಸಿಕ ಕಾರ್ಯಕ್ರಮವನ್ನು ನಡೆಸಲಾಯಿತು
ಕಾರ್ಯಕ್ರಮದಲ್ಲಿ ವಿಶೇಷವಾಗಿ ಜಿಂದಾಲ್ ವಿದ್ಯಾನಗರ ಶಾಲೆಯಸಂಗೀತ ಶಿಕ್ಷಕರಾದ ಕೊಟ್ರೇಶ್ ಸಂಡೂರು ಇವರಿಂದ ವಿಶೇಷ ಸಂಗೀತ ನಡೆಯಿತು ತಬಲಾದಲ್ಲಿ ಸುಧಾಕರ್ ಹಾರ್ಮೋನಿಯಂ ಪುಟ್ಟರಾಜ್ ಸಾತ್ ನೀಡಿದರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭರತನಾಟ್ಯ ಕಲಾವಿದೆ  ಡಾಕ್ಟರ್ ಚಾರುಲತಾ ಕೊಟ್ರೇಶ್ ಶರಣಯ್ಯ ಸ್ವಾಮಿ ದೊಡ್ಡ ಬಸವ ಗವಾಯಿ ಡಿ ಕಗ್ಗಲ್ ಸೋಮಶೇಖರ ನಿರಂಜನ ಕೋಳೂರು ಭಾಗವಹಿಸಿದ್ದರು ಮತ್ತು ಹೊಸಪೇಟೆಯ ಸುಧನ್ವ ಕೊಳಲನ್ನು ನುಡಿಸಿದರು ತಬಲಾದಲ್ಲಿಯೋಗೀಶ ಮತ್ತು ಅನೇಕ ಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಯಿತು