ಸಾಮಾಜಿಕ ಕ್ರಾಂತಿಯ ಹರಿಕಾರ ಹಡಪದ ಅಪ್ಪಣ್ಣ: ಶಿವಾನಂದ ಹಡಪದ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.15: ಹನ್ನೆರಡನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾದ ಹಡಪದ ಅಪ್ಪಣ್ಣನವರು 250 ಕ್ಕೂ ಅಧಿಕ ವಚನಗಳನ್ನು ರಚಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಸಿಂದಗಿ ಹಡಪದ ಅಪ್ಪಣ್ಣ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಶಿವಾನಂದ ಹಡಪದ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲಿಂ. ಷಡಕ್ಷರಯ್ಯ ಶಿವಪೂಜಯ್ಯ ಹಿರೇಮಠ ಹಾಗೂ ದಿ. ನಾಗಪ್ಪ ರೇವಪ್ಪ ಶೇಠೆ ಇವರ ಹೆಸರಿನ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ಆಪ್ತರಾಗಿ ಮೂಲ ಕಾಯಕವನ್ನು ಮಾಡುತ್ತಾ ಅರ್ಥಪೂರ್ಣ ವಚನಗಳನ್ನು ರಚಿಸುವುದರ ಮೂಲಕ ವಚನಕಾರರಲ್ಲಿ ತಮ್ಮ ವ್ಯಕ್ತಿತ್ವವನ್ನು ಗುರುತಿಸಿಕೊಂಡರು ಎಂದರು.
ಸಭೆಯ ಅಧ್ಯಕ್ಷ ವಹಿಸಿದ ಡಾ. ಜಿ.ಡಿ. ಕೊಟ್ನಾಳ ಮಾತನಾಡಿ, ಮೂಢ ನಂಬಿಕೆ ಅಧ್ಯಯನಕ್ಕೆ ಒಳಪಡಿಸಿ ಶರಣರ ಮಹತಿಯನ್ನು ಸಾರಬೇಕು ಎಂದರು.
ಶರಣರ ಕುರಿತು ಉಪನ್ಯಾಸ ನೀಡಿದ ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಕಾಯಕ ಮತ್ತು ದಾಸೋಹದ ಮೂಲಕ ಸಮ ಸಮಾಜವನ್ನು ನಿರ್ಮಿಸಿದರು. ಜಾತಿ ಲಿಂಗಬೇಧವನ್ನು ಹೋಗಲಾಡಿಸಿ ಸರ್ವರನ್ನು ಪ್ರೀತಿಸಿದ ಶರಣರ ಜೀವನ ನಮಗೆ ಮಾದರಿ ಎಂದರು.
ಸಾನ್ನಿಧ್ಯ ವಹಿಸಿದ ಸಿಂದಗಿಯ ಗುರುದೇವ ಆಶ್ರಯಮದ ಪೂಜ್ಯ ಶಾಂತ ಗಂಗಾಧರ ಸ್ವಾಮೀಜಿ ಮಾತನಾಡಿ, ಶರಣರು ಯಾವುದೇ ಸ್ಥಾನಮಾನ ಬಯಸದೆ ಸಮಾಜಕ್ಕಾಗಿ ಜೀವನವನ್ನು ಮುಡುಪಾಗಿಟ್ಟರು ಎಂದರು.
ರೇವಣಸಿದ್ದಪ್ಪ ನಾಗಪ್ಪ ಶೇಠೆ, ಸತ್ಯಪ್ಪ ಹಡಪದ, ಸಿದರಾಯ ನಾವಿ, ಬಸವರಾಜ ಶಿವಶರಣ, ರಾಜೇಸಾಬ ಶಿವನಗುತ್ತಿ ವೇದಿಕೆಯ ಮೇಲಿದ್ದರು.
ಕಸಾಪ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಸ್ವಾಗತಿಸಿದರು. ರೇವತಿ ಬೂದಿಹಾಳ ನಿರೂಪಿಸಿದರು. ಸಿದ್ರಾಮಯ್ಯ ಲಕ್ಕುಂಡಿಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಗೌರವ ಕಾರ್ಯದರ್ಶಿ ಮಹಮ್ಮದಗೌಸ್ ಹವಾಲ್ದಾರ, ಬಸವರಾಜ ಆಜೂರ, ಸೋಮನಾಥ ನಾವಿ, ಆರ್.ಜಿ. ಕೋಟ್ನಾಳ, ಅಹಮ್ಮದ ವಾಲಿಕಾರ, ಶ್ರೀಕಾಂತ ನಾಡಗೌಡ, ಸಿದ್ರಾಮಪ್ಪ ಜಂಗಮಶೆಟ್ಟಿ, ಅಲಿಸಾಬ ಖಡಕೆ, ಸೋಮನಾಥ ನಾವಿ, ಭಾಗೀರಥಿ ಸಿಂದೆ, ಲತಾ ಗುಂಡಿ, ಗಂಗಮ್ಮ ರೆಡ್ಡಿ, ಆರ್.ಎಂ. ದೊಡಮನಿ, ಸತ್ಯಣ್ಣ ದೊಡಮನಿ, ಎಂ.ಎಲ್. ಜಮಾದಾರ, ಅಮೋಘÀ, ಸಿದ್ದು ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.