ನೂತನ ನಗರಸಭಾ ಆಯುಕ್ತರಾಗಿ ಸುಬ್ರಹ್ಮಣ್ಯ ಪಿ ಅಧಿಕಾರ ಸ್ವೀಕಾರ
ಸಂಜೆವಾಣಿ ವಾರ್ತೆ
ಹರಿಹರ ಜೂ 15;   ನಗರದ  ಜನರು ಆರೋಗ್ಯದಿಂದ ಬದುಕು ನಿರ್ವಹಣೆ ಮಾಡಬೇಕಾದರೆ ಸ್ವಚ್ಛತೆ ಬೇಕು. ಕೇವಲ ಅಧಿಕಾರಿ ಹಾಗೂ ಪೌರ ಕಾರ್ಮಿಕರು ಶ್ರಮ ವಹಿಸಿದರೆ ವಾತಾವರಣವನ್ನು ಸ್ವಚ್ಛವಾಗಿರಿಸಲು ಸಾಧ್ಯವಿಲ್ಲ. ಸ್ವಚ್ಛತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ನೂತನ ನಗರಸಭಾ ಆಯುಕ್ತ ಸುಬ್ರಹ್ಮಣ್ಯ ಪಿ  ಹೇಳಿದರು.ಹರಿಹರ ನಗರಸಭೆಯ ನೂತನ ಆಯುಕ್ತರಾಗಿ    ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು ಡೆಂಗ್ಯೂ ಇತರೆ ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಹರಿಹರ ನಗರದ ಪ್ರತಿಯೊಂದು ವಾರ್ಡ್ ಗಳಿಗೆ ಭೇಟಿ ನೀಡಿ  ಸ್ವಚ್ಛತೆ ಮೂಲಭೂತ ಸೌಕರ್ಯಗಳಿಗೆ ಗಮನವಹಿಸುತ್ತೇನೆ. ನಗರದ ಪ್ರತಿಯೊಂದು ಬಡಾವಣೆಯ ನಾಗರಿಕರು ತಮ್ಮ ಮನೆಯ ಸುತ್ತಮುತ್ತಲು ಆಸುಪಾಸಿನಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಲ್ಲೆಂದರಲ್ಲಿ ಕಸ ಚೆಲ್ಲುವುದನ್ನು ಮಾಡಬೇಡಿ ನಗರಸಭೆಯಿಂದ ಬರುವಂತ ವಾಹನಗಳಿಗೆ ಮನೆಯಲ್ಲಿಟ್ಟು ಸಂಗ್ರಹಿಸಿದ ಕಸವನ್ನು ನಗರಸಭೆ ವಾಹನಕ್ಕೆ ನೀಡಬೇಕು ಎಲ್ಲಿ  ಸ್ವಚ್ಛತೆ ಉತ್ತಮ ಪರಿಸರ ಇರುತ್ತದೆ ಅಲ್ಲೇ ರೋಗರುಜನೆಗಳು  ದೂರವಿರುತ್ತವೆ ಆದ್ದರಿಂದ ಪ್ರತಿಯೊಬ್ಬ ನಾಗರಿಕರು ನಗರಸಭೆಯೊಂದಿಗೆ ಕೈಜೋಡಿಸಿ ಸ್ವಚ್ಛತೆಗೆ ಆದ್ಯತೆ ನೀಡೋಣ ಎಂದು ಹೇಳಿದರು.ಹಿಂದೆ ಬಳ್ಳಾರಿಯ ಮಹಾನಗರ ಪಾಲಿಕೆ ಸಿರುಗುಪ್ಪ ಸಿಂಧನೂರು ರಾಜ್ಯದ ಇತರರೆ  ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಹರಿಹರ ಪುಣ್ಯಕ್ಷೇತ್ರಕ್ಕೆ ಬಂದಿದ್ದೇನೆ ನನ್ನ ಪ್ರಯತ್ನ ಮೀರಿ ಪ್ರಾಮಾಣಿಕವಾಗಿ  ಕರ್ತವನ್ನು ನಿರ್ವಹಿಸುತ್ತೇನೆ ಎಂದರು.