ತೋಟಗಾರಿಕೆ ಇಲಾಖೆಯಿಂದ ರೈತರಿಗೆ ವಿವಿಧ ಯೋಜನೆಗಳಿಗೆ ಅರ್ಜಿ ಅಹ್ವಾನ
ಸೇಡಂ, ಜು,15: 2024-25 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್, ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ (ಬಾಳೆ, ಸೀಬೆ, ಬಿಡಿ ಹೂ ಗಳು, ಹೈಬ್ರಿಡ್ ತರಕಾರಿ ಹಾಗೂ ಪ್ರಾಸಿಕ್ ಮಲ್ಟಿಂಗ್) ತೋಟಗಾರಿಕೆಯಲ್ಲಿ ಯಾಂತ್ರಿಕಾರಣ (ಮಿನಿ ಟ್ರ್ಯಾಕ್ಟರ್ 20hಠಿ Pಖಿಔ ಅಶ ಶಕ್ತಿಯ ಕೆಳಗೆ) ಸಂರಕ್ಷಿತ ಬೇಸಯದಲಿ, ಹಸಿರು ಮನೆ (Poಟಥಿ ಊouse),ಕೋಯೋತ್ತರ ನಿರ್ವಾಹಣೆ ಘಟಕಗಳಾದ ಪ್ಯಾಕ್ ಹೌಸ್, ಕಡಿಮೆ ವೆಚ್ಚದ ಈರುಳ್ಳಿ, ಶೇಖರಣ ಘಟಕ ಗಳಿಗೆ ಸಹಾಯಧನ ಲಭ್ಯವಿದ್ದು ನೀರಾವರಿ ಸೌಲಭ್ಯ ಹೊಂದಿರುವ ರೈತರು ಈ ಕಛೇರಿಗೆ ಬೇಟಿ ನೀಡಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ. ಮುಂದುವರೆದು ಕೇಂದ್ರ ಪುರಸ್ಕøತ ಕೃಷಿ ಸಿಂಚಾಯ ಯೋಜನೆಯಡಿ ಹನಿ ನೀರಾವರಿ ಘಟಕ ಅಳವಡಿಸಲು ಸಾಮಾನ್ಯ ವರ್ಗದ ರೈತರಿಗೆ 2 ಹೆಕ್ಟರ್ ವರೆಗೆ ಶೇ 55% ರಷ್ಟು ಸಹಾಯಧನ ಲಭ್ಯವಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ 90% ಸಹಾಯಧನ ಲಭ್ಯವಿದ್ದು ಆಸಕ್ತಿ ಹೊಂದಿರುವ ರೈತರು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಸಮಗ್ರ ತೋಟಗಾರಿಕೆ ಅಭಿವೃದ್ಧಿ, ಯೋಜನೆಯಡಿ ಮಾವು, ನುಗ್ಗೆ ಬೆಳೆಗೆ ಸಹಾಯಧನ ಲಭ್ಯವಿದ್ದು ಈ ಮೇಲೆ ತಿಳಿಸಿರುವ ಎಲ್ಲಾ ಯೋಜನೆಗಳಿಗೆ ದಿನಾಂಕ: 20/07/2024ರ ಕಛೇರಿ ಸಮಯ 5:30ರ ಒಳಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:
1.ಪಹಣಿ, 2. ಹೋಲಿಂಗ್ 3. ನೀರುಬಳಕೆ ಪ್ರಮಾಣ ಪತ್ರ 4. ಗಣಕಿಕೃತ ಬೆಳೆ ದೃಢೀಕರಣ 5. ಆಧಾರ
ಕಾರ್ಡ್ 6. ಬ್ಯಾಂಕ್ ಪಾಸ್ ಬುಕ್ ಜಿರಾಕ್ಸ್ 7. ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ) ಸಲ್ಲಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಸೇಡಂ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.