ವನಮಹೋತ್ಸವಕ್ಕೆ ಚಾಲನೆ
ಬಂಕಾಪುರ,ಜು15: ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾದಾಗ ಸಮೃದ್ಧ ಮಳೆ ಬಂದು ಉತ್ತಮ ಫಸಲು ಬರಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಒಂದೊಂದು ಸಸಿ ನೆಟ್ಟು ವಾಸಿಸುವಂತೆ ಹಾವೇರಿಯ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ಕೊಂದೂರು ಗ್ರಾಮದ ಶ್ರೀ ರುದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು ಪರಿಸರ ಮಾಲಿನ್ಯದಿಂದ ರೋಗಗಳು ಹರಡುತ್ತಿವೆ. ಪರಿಸರವನ್ನು ಶುದ್ಧ ಸ್ವಚ್ಛವಾಗಿಡಲು ಶ್ರಮಿಸಬೇಕು, ಇಲ್ಲದಿದ್ದರೆ ಮಾರಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಸ್ವಚ್ಛ ಪರಿಸರದಿಂದ ಆರೋಗ್ಯದ ಜೀವನ ನಡೆಸಬಹುದಾಗಿದೆ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ದೀಪ ಹಿರೇಮಠ, ಶಾಲಾ ಸಂಸ್ಥಾಪಕ ಅಧ್ಯಕ್ಷ ವಿ.ಎಸ್. ಹಿರೇಮಠ್ ಅಮೃತ ಹಿರೇಮಠ್, ಗೀತಾ ಭಜಂತ್ರಿ, ಲತಾ ಹಾವಣಗಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.