ಕೆರೆ ತುಂಬಿಸಲು ಕ್ರಮ
ಲಕ್ಷ್ಮೇಶ್ವರ,ಜು15: ತಾಲೂಕಿನ ಬಾಲೆಹೊಸೂರು ಗ್ರಾಮದ ಎರಡು ಕೆರೆಯನ್ನು ಹಾವೇರಿ ಜಿಲ್ಲೆಯ ಮರಡೂರು ಗ್ರಾಮದ ಸಮೀಪವಿರುವ ವರದಾ ನದಿಯ ಸಮೀಪ ನಿರ್ಮಿಸಿರುವ ಬ್ಯಾರೇಜಿನಿಂದ ಮತ್ತು ಜಾಕ್ ವ್ಯಾಲಿನಿಂದ ನೀರು ತುಂಬಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಕಾರ್ಯೋನ್ಮುಖ ವಾಗಿದೆ.
ಬಾಲೆಹೊಸೂರು ಗ್ರಾಮದ ಒಟ್ಟು ಮೂರು ಕೆರೆಗಳನ್ನು ತುಂಬಿಸುವ ವರದಾ ನದಿಯ ಈ ಯೋಜನೆಯಲ್ಲಿ ಈಗ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಒಂದು ಕೆರೆ ಹಾಗೂ ದಿಂಗಾಲೇಶ್ವರ ಮಠದ ಸಮೀಪವಿರುವ ಒಂದು ಕೆರೆಯನ್ನು ತುಂಬಿಸಲು ನೀರನ್ನು ಹರಿ ಬಿಡಲಾಗಿದೆ.