ವಿದ್ಯುತ್ ತಗುಲಿ 3 ಜಾನುವಾರುಗಳ ಸಾವು
ಚನ್ನಮ್ಮನ ಕಿತ್ತೂರ, ಜು15: ಸಮೀಪದ ಖಾನಾಪೂರ ತಾಲೂಕಿನ ಕಡತನಬಾಗೇವಾಡಿ ಗ್ರಾಪಂ ವ್ಯಾಪ್ತಿಗೆ ಸೇರಿರುವ ತೊಲಗಿ ಗ್ರಾಮದ ಹತ್ತಿರದ ಹೊಲದಲ್ಲಿ ವಿದ್ಯುತ್ ಕಂಬz ತಂತಿ ತುಂಡಾಗಿ ಕೆಳಗೆ ಬಿದ್ದಿದರಿಂದ ಮೂರು ಜಾನುವಾರುಗಳು ವಿದ್ಯುತ್ ತಗುಲಿ ಸಾವನ್ನಪ್ಪಿವೆ.
ನೇಗಿಲಯೋಗಿ ಸುರಕ್ಷಾ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಸನಗೌಡ ಪಾಟೀಲ ಭೇಟಿನೀಡಿ, ಇದು ಹೆಸ್ಕಾಂ ನಿರ್ಲಕ್ಷದಿಂದ ಈ ಘಟನೆ ನಡೆದಿದೆ ಎಂದರು.
ಇಟಗಿ ಹೆಸ್ಕಾಂ ಅಧಿಕಾರಿ ಶಿವಾನಂದ ಮುರಗೋಡ ಮಾತನಾಡಿ ಈ ಘಟನೆಯನ್ನು ತಕ್ಷಣವೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಜರುಗಿಸಲಾವುದೆಂದರು.
ರಾಜ್ಯ ಸಂಚಾಲಕ ಮಹಾಂತೇಶ ಗೌರಿ, ಜಿಲ್ಲಾ ಕಾರ್ಯದರ್ಶಿ ಪಡದಯ್ಯಾ ಚಿಕ್ಕಮಠ, ಸೇರಿದಂತೆ ಗ್ರಾಮಸ್ಥರಿದ್ದರು.