ಜನಸಂಖ್ಯಾ ಸ್ಪೋಟದ ಬಗ್ಗೆ ಎಚ್ಚರಿಕೆ ಇರಲಿ
ಬಾಗಲಕೋಟೆ,ಜು15: ವಿದ್ಯಾರ್ಥಿಗಳು ಜಸನಸಂಖ್ಯಾ ಸ್ಪೋಟದ ಬಗ್ಗೆ ಎಚ್ಚರವಹಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಪ್ರಾಚಾರ್ಯ ಎಸ್.ಜೆ,ಒಡೆಯರ ಹೇಳಿದರು.
ಅವರು ನಗರದ ಅಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಬಾಗಲಕೋಟೆ ಹಾಗೂ ತಾಲೂಕ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ “ವಿಶ್ವ ಜನಸಂಖ್ಯಾ ದಿನಾಚರಣೆ” ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಜನಸಂಖ್ಯೆ ಸ್ಪೋಟ ಇದು ಜಗತ್ತಿನಲ್ಲಿಯೇ ಒಂದು ಭಯಾನಕ ಸಂಗತಿ .ಜನಸಂಖ್ಯೆ ಬೆಳೆಯುತ್ತದೆ ಭೂಮಿ ಬೆಳೆಯುವುದಿಲ್ಲ ಎಂಬುದು ಯುವಕರಲ್ಲಿ ಅರಿವಿರಬೇಕು. ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಆರೋಗ್ಯ ರಕ್ಷಣಾಧಿಕಾರಿಗಳಾದ ಶಶಿಕಲಾ ಸಿನ್ನೂರ್ ಅವರು ಮಾತನಾಡಿ ಜನಸಂಖ್ಯೆ ಬೆಳವಣಿಗೆಯಿಂದ ಬಡತನ, ಅನಾರೋಗ್ಯ, ಕೌಟುಂಬಿಕ ಸಮಸ್ಯೆಗಳು ತೆಲೆ ಹೆಚ್ಚಾಗುತ್ತವೆ, ಆದ್ದರಿಂದ ಜನಸಂಖ್ಯೆ ಬೆಳವಣಿಗೆ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಇರಬೇಕೆಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್. ವೈ. ಗೂಗಿಹಾಳ ಮಾತನಾಡಿ ಜನಸಂಖ್ಯೆ ತಡೆಗಟ್ಟುವಲ್ಲಿ ಸರ್ಕಾರದ ಎಲ್ಲ ಯೋಜನೆಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಐ.ಖ.ಕರ್ಜಗಿ , ಎಸ್.ಆರ್ .ಬಡ್ಡಿ, ಕುಮಾರಿ ರೇಖಾ ಅಂಗಡಿ ಉಪಸ್ಥಿತರಿದ್ದರು.