ವಿದ್ಯಾರ್ಥಿಗಳ ಜೀವನವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಿ: ಬಿ.ಇ.ಓ ಸುರೇಶ್
ಸಂಜೆವಾಣಿ ವಾರ್ತೆ
ನಂಜನಗೂಡು: ಜು.15:- ಶತಮಾನಗಳ ಇತಿಹಾಸವುಳ್ಳ ವಿದ್ಯಾಕೇಂದ್ರವಾದ ಸರ್ಕಾರಿ ಬಾಲಕರ ಹಿರಿಯ ವಿದ್ಯಾರ್ಥಿಗಳ ಹಿತೈಷಿ ಬಳಗದ ವತಿಯಿಂದ 2023 24ನೇ ಸಾಲಿನ ಸರ್ಕಾರಿ ಶಾಲೆಯಲ್ಲಿ ಉನ್ನತ ಶ್ರೇಣಿ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ನಂಜನಗೂಡು ಹೃದಯ ಭಾಗದ ಅತ್ಯಂತ ಹಿರಿಯ ಶತಮಾನದ ಅಂಚಿಗೆ ಕಾಲಿಡುತ್ತಿರುವ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಿತೈಷಿ ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ನಡೆಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆಯನ್ನು ಸಸಿಗೆ ನೀರು ಹಾಕುವುದರ ಮೂಲಕ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ವಿ ಸುರೇಶ್ ಉದ್ಘಾಟಿಸಿ ಈ ಶಾಲೆಯು ಅತ್ಯಂತ ಹಿರಿಯದಾಗಿದ್ದು ಹಾಗೂ ಶಾಲೆಯಲ್ಲಿ ಓದಿದ ಅನೇಕ ಹಿರಿಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಅಧಿಕಾರಿಗಳಾಗಿ ಉದ್ಯಮಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇದಕ್ಕೆ ಈ ಕಾಲೇಜು ಸಾಕ್ಷಿಯಾಗಿದೆ ಹಿರಿಯ ವಿದ್ಯಾರ್ಥಿಗಳು ಸ್ನೇಹ ಬಳಗವನ್ನು ಮಾಡಿಕೊಂಡು ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನೇಕ ಸೌಕರ್ಯಗಳನ್ನು ಹಾಗೂ ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯಗಳಿಗೆ ಸಹಕಾರಿಗಳಾಗಿ ಮಾಡುತ್ತಿರುವುದು ಅತ್ಯಂತ ಹಿರಿಯ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು ಈಗಿನ ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕಗಳನ್ನು ಓದಿ ಶಾಲೆಗೆ ಹಾಗೂ ಪೆÇೀಷಕರಿಗೆ ಕೀರ್ತಿಯನ್ನ ತನ್ನಿ ಎಂದು ಕಿವಿಮಾತು ಹೇಳಿದರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ರವರು ಮಾತನಾಡಿ ಶಾಲೆಯಲ್ಲಿ ಶಿಕ್ಷಕರು ಬೋಧನೆ ಮಾಡಿದಂತಹ ಪಾಠಗಳನ್ನು ಅಂದೇ ಓದಿದರೆ ಇಂತಹ ಪ್ರತಿಭಾ ಪುರಸ್ಕಾರಕ್ಕೆ ತಾವು ಪುರಸ್ಕತರಾಗುತ್ತೀರಾ ಎಂದು ಮಕ್ಕಳಿಗೆ ತಿಳಿ ಹೇಳಿದರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ಯಾರ್ಥಿ ಶೇಷಾದ್ರಿ ಮಾತನಾಡಿ ಶಾಲೆಯಲ್ಲಿ ವಿದ್ಯಾರ್ಥಿಗಳು ಶಿಸ್ತು ಮತ್ತು ಸಮ್ಯತೆ ಮೊದಲು ಬೆಳೆಸಿಕೊಳ್ಳಬೇಕು ಗುರುಗಳಿಗೆ ಹಾಗೂ ಪೆÇೀಷಕರಿಗೆ ಗೌರವ ನೀಡಬೇಕು ಹಾಗೂ ಗೌರವಿಸಬೇಕೆಂದು ತಿಳಿಸುತ್ತಾ ತಮ್ಮ ಶಾಲಾ ಅವಧಿಯ ಅನುಭವಗಳನ್ನ ವಿದ್ಯಾರ್ಥಿಗಳಿಗೆ ಹಂಚಿಕೊಂಡರು ಈ ಕಾರ್ಯಕ್ರಮದಲ್ಲಿ ಸುಮಾರು 21 ಎಸ್ ಎಸ್ ಎಲ್ ಸಿ ಯಲ್ಲಿ ಸಾಧನೆ ಮಾಡಿದಂತಹ ವಿದ್ಯಾರ್ಥಿಗಳಿಗೆ ಪಿಯುಸಿಯಲ್ಲಿ ಮೂರು ವಿದ್ಯಾರ್ಥಿಗಳಿಗೆ ನಗದು ಪೇಟ ಶಾಲು ಹಾರ ಹಾಕಿ ಗೌರವಿಸಿದರು.
ಈ ಸಂಘದ ಅಧ್ಯಕ್ಷರಾದ ಯಶವಂತ ಮಾತನಾಡಿ ಬಡ ವಿದ್ಯಾರ್ಥಿಗಳಿಗೆ ಈ ಹಿತೈಷಿ ಸಂಘ ಸಹಾಯಮಾಡುತ್ತದೆ ಎಂದರು ಪ್ರಾಸ್ತಾವಿಕ ನುಡಿಗಳನ್ನು ವಸಂತ್ ಮಾತನಾಡುತ್ತಾ ನಮ್ಮ ಸಂಗವೂ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಕಳೆದ ಎರಡು ವರ್ಷಗಳಿಂದಲೂ ಈ ಸತ್ಕಾರ್ಯಕ್ಕೆ ಸಂಘ ಸಹಕಾರಿಯಾಗಿದೆ ಮುಂದಿನ ದಿನಗಳಲ್ಲಿ ಈ ಶಾಲೆಯು ನೂರು ವರ್ಷಗಳ ಪೂರೈಸುತ್ತಿರುವುದರಿಂದ ಪೂರ್ಣ ಪ್ರಮಾಣದ ಸಹಕಾರವನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡುತ್ತೇವೆಂದು ಭರವಸೆ ನೀಡಿದರು ನಾವು ಕಳೆದ ಹತ್ತು ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ನಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಮನೆಗೆ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿ ಗುರುವೊಂದನೇ ಸಲ್ಲಿಸಿ ಬರುವ ಕಾರ್ಯಕ್ರಮವನ್ನು ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಎಂದು ನಡೆಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಬಾಲ ಸರಸ್ವತಿ ಹಿರಿಯ ವಿದ್ಯಾರ್ಥಿಗಳಾದ ಯಧುಕುಮಾರ್ , ಉಮೇಶ್ ಮಂಜುನಾಥ್ ವಿಜಿ ಕೃಷ್ಣ ಮಹಾದೇವಸ್ವಾಮಿ ರವಿ ಎಲ್ಲರನ್ನೂ ಸತೀಶ್ ದಳವಾಯಿ ಸ್ವಾಗತಿಸಿದರೆ ರಮೇಶ್ ನಿರೂಪಿಸಿದರು.