ದೇಶದ ಅಭಿವೃದ್ದಿಗೆ ಸ್ವಯಂಸೇವಾ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.15:- ದೇಶದ ಅಭಿವೃದ್ದಿಗೆ ಸ್ವಯಂಸೇವಾ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ. ಹಲವಾರು ಕ್ಷೇತ್ರಗಳಲ್ಲಿ ಸ್ವಯಂಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದೆ ಎಂದು ಚಾಮರಾಜನಗರ ಯುತ್‍ಫಾರ್ ಸೇವಾ ಸಂಸ್ಥೆ ಮನೋಜ್ ತಿಳಿಸಿದರು.
ಜುಲೈ 20 ರಂದು ಚಾಮರಾಜೇಶ್ವರ ರಥೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ನಗರಸಭೆ, ಯುತ್ ಪಾರ್ ಸೇವಾ ಮತ್ತು ಚಾಮರಾಜನಗರ ವಿಶ್ವ ವಿದ್ಯಾನಿಲಯ ಎನ್.ಎಸ್.ಎಸ್ ಘಟಕ, ಇವರ ಸಹಯೋಗದಲ್ಲಿ ನಗರದ ಚಾಮರಾಜೇಶ್ವರ ಮುಂಭಾಗದಲ್ಲಿ ಇರುವ ಚಾಮರಾಜೇಶ್ವರ ಉದ್ಯಾನವನದ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಸ್ವಚ್ಚತೆಯ ಬಗ್ಗೆ ಗಮನ ಅರಿಸಬೇಕು. ಸ್ವಚ್ಚತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು. ಜಾತ್ರೆ, ಉತ್ಸಾವ, ಸಮಾರಾಂಭಗಳಲ್ಲಿ ಕಸ ಹಾಗೂ ನೈರ್ಮಲ್ಯಗಳನ್ನು ನಿಗದಿತ ಸ್ಥಳಗಳಲ್ಲಿ ಹಾಕುವುದರಿಂದ ಸ್ವಚ್ಚತೆಯಿಂದ ಇರುತ್ತದೆ. ಎಂದು ತಿಳಿಸಿದರು.
ನಗರಸಭೆಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ್ ಚಾಮರಾಜನಗರದಲ್ಲಿ ಹಲವಾರು ಎನ್.ಜಿ.ಒಗಳು ಸ್ವಯಂ ಪ್ರೇರಿತವಾಗಿ ಸೇವೆಗಳನ್ನು ನೀಡುತಾ ಬಂದಿದೆ. ಚಾಮರಾಜೇಶ್ವರ ರಥೊತ್ಸವದ ಅಂಗವಾಗಿ ಎನ್.ಜಿ.ಒ ಕಾರ್ಯಕರ್ತರು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿ ಪಾರ್ಕ್ ಸ್ವಚ್ಚಗೊಳಿಸಲು ಮುಂದಾಗಿದ್ದಾರೆ ಅವರಿಗೆ ಅಭಿನಂದನೆಗಳು. ಎಲ್ಲ ಕೆಲಸಗಳನ್ನು ಇಲಾಖೆಗಳೆ ಮಾಡಲು ಸಾಧ್ಯವಿಲ್ಲ ಅದಕ್ಕೆ ಕೆಲವು ಸಂಘಟನೆಗಳು ಕೈ ಜೋಡಿಸಿದರೆÀ ಶುದ್ದವಾಗುತ್ತದೆ ಎಂದು ಹೇಳಿದರು.
ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಮತ್ತು ಕಾರ್ಯಕ್ರಮಾಧಿಕಾರಿ ಡಾ. ಮಹೇಶ್.ಆರ್ ಕೋಡಿಉಗನೆ, ಆಷಾಡ ಮಾಸದಲ್ಲಿ ಬರುವ ರಥೋತ್ಸವಕ್ಕೆ ಲಕ್ಷಾಂತರ ಭಕ್ತಾಧಿಗಳು ಬರುವುದರಿಂದ ಸ್ವಚ್ಚತೆಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ. ಸಾರ್ವಜನಿಕರು ಕಸಗಳನ್ನು ರಸ್ತೆಯಲ್ಲೇ ಹಾಕಬಾರದು ಗಲೀಜುಗಳನ್ನು ಮಾಡಬಾರದು ಇದರಿಂದ ಸೊಳ್ಳೆಗಳು ಹೆಚ್ಚಾಗಿ ರೋಗಗಳು ಹರಡಲಿದೆ ಎಂದು ಹೇಳಿದರು.
ಹಸಿರು ಪಡೆ ಕಾರ್ಯದರ್ಶಿ ಸತೀಶ್ ಸ್ವಚ್ಚತೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಯುತ್‍ಪಾರ್ ಸೇವಾ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕರಿಗೆ ಪ್ರಮಾಣ ಪತ್ರವನ್ನು ಮಂಜುನಾಥ್ ವಿತರಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಚಾಮರಾಜನಗರ ನಗರಸಭಾ ನೌಕರರು, ಯೂತ್‍ಫಾರ್ ಸೇವಾ ಸಂಸ್ಥೆ, ಚಾ.ವಿ.ವಿ ಎನ್.ಎಸ್.ಎಸ್ ಘಟಕ, ಗ್ರಾಮ ಮಿತ್ರ ಫೌಡೇಷನ್ ಹಾಗೂ ಹಸಿರುಪಡೆ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಯುತ್‍ಫಾರ್ ಸೇವಾ ಸಂಸ್ಥೆ ಮನೋಜ್, ಗ್ರಾಮ ಮಿತ್ರ ಫೌಡೇಷನ್ ಕಾರ್ಯದರ್ಶಿ ವಿಜಯಪ್ರಸಾದ್, ಸಮಾಜ ಸೇವಕರು ಪರಮೇಶ್, ಸುರೇಶ್‍ಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.