ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾರಿಸಿದ್ದ ಧರ್ಮದ್ವಜ ತೆರವು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.15: ಕೆರಗೋಡು ಧ್ವಜ ವಿವಾದದ ಅನಂತರ ಪಟ್ಟಣದಲ್ಲಿಯೂ ಧ್ವಜ ವಿವಾದ ಆರಂಭಗೊಂಡಿದ್ದು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾರಿಸಿದ್ದ ಕಳಸ ತಳಹದಿಯ ಕೇಸರಿ ಬಣ್ಣದ ಧರ್ಮದ್ವಜವನ್ನು ಪೆÇಲೀಸರ ನೆರವಿನೊಂದಿಗೆ ಪುರಸಭೆಯ ಅಧಿಕಾರಿಗಳು ತೆರವುಗೊಳಿಸಿದರು.
ಧರ್ಮ ದ್ವಜವನ್ನು ತೆರವುಗೊಳಿಸಿದ ಪುರಸಭೆ ಹಾಗೂ ಪೆÇಲೀಸರ ನಡೆಯನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರವಾಸಿ ಮಂದಿರ ವೃತ್ತದಲ್ಲಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಏನಿದು ವಿವಾದ:- ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಧ್ವಜ ಸ್ತಂಭ ನಿರ್ಮಿಸಿ ಕಳೆದ 40 ವರ್ಷಗಳಿಂದಲೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೇಸರಿ ಬಣ್ಣದ ಭಾಗವಧ್ವಜವನ್ನು ಹಾರಿಸಿದ್ದರು. ಯಾವುದೇ ವಿವಾದವಿಲ್ಲದೆ ವೃತ್ತದಲ್ಲಿ ಧರ್ಮಧ್ವಜ ಹಾರಾಡುತ್ತಿತ್ತು. ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ಡಾ.ಬಾಬಾ ಸಾಹೇಬ್ ಅಂಭೇಡ್ಕರ್ ಅವರ ಜಯಂತಿಯ ಸಂದರ್ಭದಲ್ಲಿ ಹಾರಾಡುತ್ತಿದ್ದ ಧರ್ಮಧ್ವಜದ ತಲೆಯ ಮೇಲೆ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ನೀಲಿ ಭಾವುಟವನ್ನು ಹಾರಿಸಿದರು. ಅದು ಸಂಸತ್ ಚುನಾವಣೆಯ ಸಂದರ್ಭವಾದ ಕಾರಣ ಹಿಂದೂಪರ ಸಂಘಟನೆಗಳು ಮತ್ತು ಪುರಸಭೆಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆಗೆ ಮುಂದಾಗಿರಲಿಲ್ಲ. ಚುನಾವಣೆ ಮಗಿದ ಅನಂತರವೂ ಕೆಲ ಕಾಲ ಹಿಂದೂಪರ ಸಂಘಟನೆಗಳ ಧರ್ಮಧ್ವಜ ಹಾಗೂ ಅದರ ನೆತ್ತಿಯ ಮೇಲೆ ನೀಲಿ ಧ್ವಜ ಹಾರಡುತ್ತಲೇ ಇತ್ತು. ಕಳೆದ ಜೂನ್ ತಿಂಗಳಿನಲ್ಲಿ ಒಂದು ದಿನ ಇದ್ದಕ್ಕಿದಂತೆ ಸಕ್ರಿಯರಾದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಧರ್ಮಧ್ವಜದ ತಲೆಯ ಮೇಲೆ ಹಾರಾಡುತ್ತಿದ್ದ ನೀಲಿ ಧ್ವಜವನ್ನು ತೆಗೆದು ಹೊಸದಾಗಿ ಭಾಗವಧ್ವಜ ಹಾರಿಸಿದರು. ನೀಲಿ ಧ್ವಜ ತೆಗೆದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕ್ರಮವನ್ನು ಖಂಡಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗೆ ಸಜ್ಜಾದರು. ಕೆರಗೋಡು ಧ್ವಜ ವಿವಾದದಂತೆ ಕೆ.ಆರ್.ಪೇಟೆ ಪಟ್ಟಣದಲ್ಲಿಯೂ ಧ್ವಜ ದಂಗಲ್ ಆಂಭಗೊಳ್ಳುವ ಸುಳಿವು ಅರಿತ ಪಟ್ಟಣ ಪೆÇಲೀಸರು ಪ್ರವಾಸಿ ಮಂದಿರ ವೃತ್ತದಲ್ಲಿ ಹಾರಾಡುತ್ತಿದ್ದ ಧರ್ಮಧ್ವಜವನ್ನು ಧ್ವಜಸ್ತಂಭದ ಸಮೇತ ತೆರವುಗೊಳಿಸಿ ವೃತ್ತದ ಸುತ್ತ ಬ್ಯಾರೀಕೆಡ್ ಹಾಕಿ ಯಾವುದೇ ಅಹಿತರ ಘಟನೆಗಳಿಗೂ ಆಸ್ಪದವಾಗದಂತೆ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು.
ನೆನ್ನೆ ( ಜುಲೈ 13 ) ರಾತ್ರಿ ಯಾವುದೇ ರೀತಿಯ ಸುಳಿವು ನೀಡದೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹೊಸದಾಗಿ ಕಳಸ ಮಾದರಿಯ ತಳಹದಿ ಹೊಂದಿದ್ದ ಧ್ವಜ ಸ್ತಂಭವನ್ನು ನಿರ್ಮಿಸಿ ಪ್ರವಾಸಿ ಮಂದಿರ ವೃತ್ತದಲ್ಲಿ ಅಳವಡಿಸಿ ಕೇಸರಿ ಬಣ್ಣದ ಧರ್ಮ ಧ್ವಜವನ್ನು ಆರೋಹಣ ಮಾಡಿದ್ದರು. ಧ್ವಜ ಸಂಬಂಧ ಯಾವುದೇ ವಿವಾದ ಉಂಟಾಗಬಾರದೆಂಬ ಕಾರಣದಿಂದ ಧ್ವಜ ಸ್ತಂಭದ ಕೆಳಭಾಗದಲ್ಲಿನ ಕಳಸ ಮಾದರಿಯ ನಿರ್ಮಾಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಬಸವಣ್ಣ, ವೀರ ಮದಕರಿ ನಾಯಕ, ಸಂಗೊಳ್ಳಿ ರಾಯಣ್ಣ, ನಾಡಪ್ರಭು ಕೆಂಪೇಗೌಡ, ಮಡಿವಾಳ ಮಾಚಿದೇವರು ಮುಂತಾದ ಮಹಾನ್ ನಾಯಕರು ಹಾಗೂ ದಾರ್ಶನಿಕರ ಭಾವಚಿತ್ರಗಳನ್ನು ಅಳವಡಿಸಿದ್ದರು.
ಧರ್ಮಧ್ವಜ ಹಾರಾಡಿದ ಕೆಲವೇ ಘಂಟೆಗಳಲ್ಲಿ ಸಕ್ರಿಯರಾದ ಪುರಸಭೆಯ ಅಧಿಕಾರಿಗಳು ಮತ್ತು ಪಟ್ಟಣ ಪೆÇಲೀಸರು ಭಾನುವಾರ ಮುಂಜಾನೆ 04 ಗಂಟೆಯ ವೇಳೆಗೆ ಬೆಳಗಾಗುವ ಮುನ್ನವೇ ಪ್ರವಾಸಿ ಮಂದಿರ ವೃತ್ತದಲ್ಲಿದ್ದ ಕಳಸ ಮಿಶ್ರಿತ ಧರ್ಮಧ್ವಜವನ್ನು ತೆರವುಗೊಳಿಸಿ ಸಾಗಿಸಲು ಮುಂದಾದರು. ಧರ್ಮಧ್ವಜ ತೆರವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪುರಸಭೆ ಹಾಗೂ ಪೆÇಲೀಸರ ನಡೆಯನ್ನು ಖಂಡಿಸಿ ಪ್ರವಾಸಿ ಮಂದಿರ ವೃತ್ತದಲ್ಲಿಯೇ ಪ್ರತಿಭಟನೆ ಆರಂಭಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಹಿಂದೂಪರ ಸಂಘಟನೆಗಳ ಮುಖಂಡ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ನಟರಾಜ್ ಕಳೆದ 40 ವರ್ಷಗಳಿಂದಲೂ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಭಾಗವಧ್ವಜ ಹಾರಾಡುತ್ತಿದೆ. ಇದಕ್ಕೆ ಯಾರೂ ವಿರೋಧ ಮಾಡಿಲ್ಲ. ಹಿಂದೂ ಸಮುದಾಯದ ಸರ್ವ ಜಾತಿಯ ಜನರೂ ಧರ್ಮದ ಅಡಿಯಲ್ಲಿಯೇ ಬದುಕುತ್ತಿದ್ದೇವೆ. ಆದರೆ ಇತ್ತೀಚೆಗೆ ಕೆಲವರು ಉದ್ದೇಶಪೂರ್ವಕವಾಗಿ ಇದಕ್ಕೆ ವಿವಾದದ ಸ್ವರೂಪ ನೀಡುತ್ತಿದ್ದಾರೆ. ದಲಿತರೂ ಸೇರಿದಂತೆ ನಾವೆಲ್ಲರೂ ಒಂದು ಎನ್ನುವುದು ನಮ್ಮ ನೀತಿ. ಆದರೆ ಸರ್ಕಾರಿ ಅಧಿಕಾರಿಗಳು ಅನಗತ್ಯ ಪ್ರವೇಶ ಮಾಡಿ ಹಿಂದೂ ಸಮುದಾಯಗಳ ನಡುವೆ ಭಿನ್ನಮತ ಹುಟ್ಟು ಹಾಕುತ್ತಿದ್ದಾರೆ. ರಾಜ್ಯದಾದ್ಯಂತ ಹಿಂದೂ ಸಮುದಾಯ ಹಾರಿಸುತ್ತಿರುವ ಕೇಸರಿ ಧ್ವಜವನ್ನು ತೆರವುಗೊಳಿಸಲು ರಾಜ್ಯ ಸರ್ಕಾರವೇ ಕೆಲವು ಸಂಘಟನೆಗಳನ್ನು ಬಳಕೆ ಮಾಡಿಕೊಂಡು ವಿವಾದವನ್ನು ಹುಟ್ಟುಹಾಕುತ್ತಿದೆ ಎಂದು ಕಿಡಿಕಾರಿದರು.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪಾಂಡವಪುರ ಉಪ ವಿಭಾಗಧಿಕಾರಿ ನಂದೀಶ್ ಹಾಗೂ ನಾಗಮಂಗಲ ಡಿವೈಎಸ್‍ಪಿ ಡಾ.ಸುಮಿತ್ ಪ್ರತಿಭಟನಾಕಾರೊಂದಿಗೆ ಮಾತನಾಡಿದರು. ಸರ್ಕಾರದ ಯಾವುದೇ ಪೂರ್ವಾನುಮತಿಯಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಪ್ರತಿಮೆ ಹಾಗೂ ಧ್ವಜಗಳನ್ನು ಹಾಕುವಂತಿಲ್ಲ ಎಂದು ಸ್ಪಷ್ಟಪಡಿಸಿದ ಉಪ ವಿಭಾಗಾಧಿಕಾರಿ ನಂದೀಶ್ ಹಿಂದೂಪರ ಸಂಘಟನೆಗಳು ಪುರಸಭೆಗೆ ಅನುಮತಿ ಕೋರಿ ಮನವಿ ಸಲ್ಲಿಸಲಿ. ಪುರಸಭೆ ಅನುಮೋಧಿಸಿದರೆ ಅದನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಸರ್ಕಾರ ಅನುಮತಿ ನೀಡಿದರೆ ಪ್ರವಾಸಿ ಮಂದಿರ ವೃತ್ತದಲ್ಲಿ ಧರ್ಮಧ್ವಜ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದೆಂದು ತಿಳಿಸಿದರು. ಅನಂತರ ಪ್ರತಿಭಟನೆಯನ್ನು ಕೈಬಿಟ್ಟ ಹಿಂದೂ ಕಾರ್ಯಕರ್ತರು ಭಾಗವಧ್ವಜ ಸ್ಥಂಭವನ್ನು ಟ್ರಾಕ್ಟರ್ ಮೂಲಕ ತೆಗೆದುಕೊಂಡು ಹೋದರು.
ಪುರಸಭೆಯ ಮಾಜಿ ಅಧ್ಯಕ್ಷ ನಟರಾಜು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರಾದ ಕೇಸರಿ ಶ್ರೀನಿವಾಸ್, ಹೆಚ್.ಬಿ.ಮಂಜುನಾಥ್, ಪ್ರವೀಣ್, ಮನು, ರಾಜೇಂದ್ರ, ಮುರುಗೇಶ್, ಒಕ್ಕಲಿಗರ ಸಂಘದ ಮುಖಂಡ ನಾರಾಯಣಗೌಡ, ತಾಲೂಕು ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ ಸೇರಿದಂತೆ ಹಲವರಿದ್ದರು. ಪುರಸಭೆಯ ಮುಖ್ಯಾಧಿಕಾರಿ ರಾಜುವಠಾರ, ಪೆÇೀಲೀಸ್ ಇನ್‍ಸ್ಪೆಕ್ಟರ್ ಆನಂದೇಗೌಡ, ಪಿ.ಎಸ್.ಐ ಗಳಾದ ನವೀನ್, ಸುಬ್ಬಯ್ಯ ನೇತೃತ್ವದ ಪೆÇಲೀಸರ ತಂಡ ಸ್ಥಳದಲ್ಲಿದ್ದು ಪರಿಸ್ಥಿಯನ್ನು ನಿಯಂತ್ರಿಸಿತು.