ಪ್ರಶಸ್ತಿಯಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚಳ
ಸಂಜೆವಾಣಿ ವಾರ್ತೆ
ಔರಾದ : ಜು.15:ಗಡಿ ಭಾಗದಲ್ಲಿ ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವ ರಿಯಾಜಪಾಶಾ ಕೊಳ್ಳೂರ ಅವರ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದ್ದು ಹರ್ಷದ ಸಂಗತಿಯಾಗಿದೆ ಎಂದು ಮುಖಂಡ ಬಂಟಿ ದರಬಾರೆ ಹೇಳಿದರು.
ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ರವಿವಾರ 2023ನೇ ಸಾಲಿನ ಜೀವವೈವಿಧ್ಯ ಪ್ರಶಸ್ತಿ ಪುರಸ್ಕøತ ಪರಿಸರ ಪ್ರೇಮಿ ರಿಯಾಜಪಾಶಾ ಕೊಳ್ಳೂರ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು ರಿಯಾಜಪಾಶಾ ಅವರು ಸದಾ ಸಾಮಾಜಿಕ ಕಾರ್ಯಕ್ಕೆ ಮುಂದಾಗುವ ಮೂಲಕ ಪರಿಸರ ಸಂರಕ್ಷಣೆಗೆ ಹಾಗೂ ಬೇಸಿಗೆಯ ದಿನಗಳಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರುಣಿಸುವ ಮೂಲಕ ಪಕ್ಷಿ ಪ್ರೇಮಿಯಾಗಿ ಬರಹಗಾರರಾಗಿ ತಾಲ್ಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಅವರ ಕಾರ್ಯ ಯುವ ಪೀಳಿಗೆಗೆ ಪ್ರೇರಣಾದಾಯಕವಾಗಿದೆ, ಯಾವುದೇ ರೀತಿಯ ಫಲಾಪೆಕ್ಷೆ ಇಲ್ಲದೆ ಸಮಾಜಕ್ಕಾಗಿ ದುಡಿಯುವವರಿಗೆ ಗುರುತಿಸಿ ಸನ್ಮಾನಿಸುವುದರಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಬುಮಿಯ್ಯಾ, ಘುಡುಸಾಬ, ರಿಯಾಜಪಾಶಾ ಕೊಳ್ಳೂರ, ಮೋಹಿನ್ ಲಾಲಮದ್, ಸುರೇಶ ವರ್ಮ, ಪ್ರಶಾಂತ ಇದ್ದರು.