ಕಲಾವಿದರಿಂದ ರೋಗಿಗಳಿಗೆ ಧನಸಹಾಯ:ರೇವಣಸಿದ್ದಯ್ಯ
ಸಂಜೆವಾಣಿ ವಾರ್ತೆ
ಹುಮನಾಬಾದ್ : ಜು.15:ಕಿಡ್ನಿ ವೈಫಲ್ಯ ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತೊರುವ ಬಡ ರೋಗಿಗಳಿಗೆ ಧನ ಸಹಾಯ ನೀಡುವ ನಿಟ್ಟಿನಲ್ಲಿ ಭರವಸೆಯ ಬೆಳಕು ಜನ ಸೇವಾ ಟ್ರಸ್ಟ್ ಹಾಗೂ ಸಾನ್ವಿ ಮೆಲೋಡಿ ಆರ್ಕೆಸ್ಟ್ರಾನ ಸದಸ್ಯರು ಬೀದಿ ಸುತ್ತುವ ಮೂಲಕ ಹಣ ಸಂಗ್ರಹ ಮಾಡಿ ರೋಗಿಗಳಿಗೆ ನೀಡಲಾಗಿದೆ ಎಂದು ಕಲಾವಿದ ರೇವಣಸಿದ್ದಯ್ಯ ಹಿರೇಮಠ ತಿಳಿಸಿದರು.
ಪಟ್ಟಣದ ಜನತಾ ಕಾಲೋನಿ ಬಡಾವಣೆಯ ನಿವಾಸಿ ವಜ್ರೇಶ ಮನೆಗೆ ಭೇಟಿ ನೀಡಿ ಆರೋಗ್ಯದ ಕುರಿತು ವಿಚಾರಿಸಿ ಧನ ಸಹಾಯ ಮಾಡಿದ ಬಳಿಕ ಮಾತನಾಡಿದರು.
ಕಳೆದ ಕೆಲ ವರ್ಷಗಳಿಂದ ಸಾಮಾಜಿಕ ಸೇವೆ ಸಲ್ಲಿಸುವ ಹುಮ್ಮಸ್ಸಿನಿಂದ ಬೀದಿ ಸುತ್ತುವ ಮೂಲಕ ಹಣ ಸಂಗ್ರಹಿಸಿ ಬಡ ರೋಗಿಗಳಿಗೆ ಸಹಾಯಧನ ನೀಡುವ ಕೆಲಸ ಮಾಡುತ್ತಿದ್ದವೆ. ಹುಮನಾಬಾದ್ ಪಟ್ಟಣದ ನಿವಾಸಿ ವಜ್ರೇಶಗೆ 23 ಸಾವಿರ ಹಾಗೂ ಬೀದರ್ ನಗರದ ರೇಷ್ಮಾಗೆ 23 ಸಾವಿರ ಸೇರಿ ಒಟ್ಟು 46 ಸಾವಿರ ನಗದು ಹಣ ನೀಡಲಾಗಿದೆ ಎಂದು ತಿಳಿಸಿದರು.
ಸಮಾಜ ಸೇವಕಿ ಸಾಕ್ಷಿ ಹಿರೇಮಠ ಮಾತನಾಡಿ, ಸಾಮಾಜಿಕ ಕ್ಷೇತ್ರದಲ್ಲಿ ಬಡ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಭರವಸೆಯ ಬೆಳಕು ಜನ ಸೇವಾ ಟ್ರಸ್ಟ್ ವತಿಯಿಂದ ಸಣ್ಣ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ಪ್ರಯತ್ನ ಯಶಸ್ಸಿನತ್ತ ಸಾಗುವುದಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಘುಪ್ರೀಯಾ, ಆಕಾಶ ಕೋಟೆ, ಸೋನು ಬಣ್ಣೆರ್, ಸಂಗಮೇಶ, ಆಶಾ ಸೇರಿ ಅನೇಕರು ಉಪಸ್ಥಿತರಿದ್ದರು.