ಖಾಸ್ಗತೇಶ್ವರ ಗದ್ದುಗೆ ದರ್ಶನ ಪಡೆದ ಶಾಸಕ ರಾಜುಗೌಡ
ತಾಳಿಕೋಟೆ:ಜು.15: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠಕ್ಕೆ ರವಿವಾರರಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅವರು ಬೆಟ್ಟಿ ನೀಡಿ ಶ್ರೀ ಖಾಸ್ಗತೇಶ್ವರರ ಹಾಗೂ ವಿರಕ್ತಶ್ರೀಗಳ ಗದ್ದುಗೆಯ ದರ್ಶನ ಪಡೆದರಲ್ಲದೇ ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರಿಂದ ಆಶಿರ್ವಾದ ಪಡೆದುಕೊಂಡರು.
ಶ್ರೀ ಖಾಸ್ಗತೇಶ್ವರ ಮಠದ ಜಾತ್ರೋತ್ಸವವು ಪ್ರಾರಂಭಗೊಂಡಿದ್ದರಿಂದ ಮಠಕ್ಕೆ ಬೆಟ್ಟಿ ನೀಡಿದ ಶಾಸಕ ರಾಜುಗೌಡ ಪಾಟೀಲ ಅವರು ಗುಪ್ತ ಕಾಣಿಕೆಯನ್ನು ಶ್ರೀಮಠಕ್ಕೆ ಅರ್ಪಿಸಿದರಲ್ಲದೇ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಇದೇ ಸಮಯದಲ್ಲಿ ಶ್ರೀಗಳು ಸಹ ಶಾಸಕ ರಾಜುಗೌಡರನ್ನು ಗೌರವಿಸಿದರಲ್ಲದೇ ಪ್ರಸಾದವನ್ನು ನೀಡಿ ಶ್ರೀಖಾಸ್ಗತರು ಮತ್ತು ವಿರಕ್ತಶ್ರೀಗಳು ತಮ್ಮ ಜನಪರವಾದ ಕಾರ್ಯಗಳಿಗೆ ಶಕ್ತಿ ನೀಡಲಿ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವನ್ನು ಕಲ್ಪಿಸಲಿ ಎಂದು ಆಶಿಸಿ ಆಶಿರ್ವದಿಸಿದರು.
ಈ ಸಮಯದಲ್ಲಿ ಶ್ರೀಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಜೆಡಿಎಸ್ ತಾಲೂಕಾ ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ರಾಮು ಗುತ್ತಿಹಾಳ, ಹುಸೆನಬಾಷಾ, ಸಾಹೇಬಗೌಡ ಬೊಮ್ಮನಹಳ್ಳಿ, ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಖಾಸ್ಗತ ಮಠವು ಈಭಾಗದ ಭಕ್ತರ ಪಾಲಿನ ಆರಾದ್ಯಮಠವಾಗಿದೆ ಶ್ರೀಮಠದ ಜಾತ್ರೆ ಉತ್ಸವಗಳಿಗೆ ಪ್ರತಿವರ್ಷವು ಭಾಗಿಯಾಗುತ್ತಿದ್ದೇನೆ ಶ್ರೀಖಾಸ್ಗತರ, ವಿರಕ್ತಶ್ರೀಗಳ ಶಕ್ತಿ ಅಪಾರವಾದುದ್ದಾಗಿದೆ ಶ್ರೀಮಠಕ್ಕೆ ಭಕ್ತಿಯಿಂದ ನಡೆದುಕೊಂಡವರಿಗೆ ಯಾವಾಗಲು ಒಳ್ಳೆಯದ್ದಾಗಿದೆ.
ರಾಜುಗೌಡ ಪಾಟೀಲ(ಕು.ಸಾಲವಾಡಗಿ)
ಶಾಸಕರು ದೇವರ ಹಿಪ್ಪರಗಿ ಕ್ಷೆತ್ರ