ಆರೋಪಕ್ಕೆ ಗುರಿಯಾದ ಮಾತ್ರಕ್ಕೆ ರಾಜೀನಾಮೆ ನೀಡಬೇಕಿಲ್ಲ
ಕೋಲಾರ,ಜು,೧೫- ಆರೋಪಕ್ಕೆ ತುತ್ತಾದವರೆಲ್ಲಾ ರಾಜಿನಾಮೆ ಕೊಡಬೇಕೆಂಬುವುದು ಸಮಂಜಸವಲ್ಲ. ಅರೋಪವು ಸಾಭೀತಾದರೆ ರಾಜಿನಾಮೆ ಕೊಡಬೇಕೆಂಬುವುದು ಸಮಂಜಸವಾಗಿರುತ್ತದೆ ಎಂದು ಸಂಸದ ಮಲ್ಲೇಶ್ ಅಭಿಪ್ರಾಯ ಪಟ್ಟರು,
ಮದ್ಯಮದವರ ಪ್ರಶ್ನೆಯೊಂದಕ್ಕೆ ವಾಲ್ಮೀಕಿ ಅಭಿವೃದ್ದಿ ನಿಗಮದ ೧೮೭ ಕೋಟಿ ರೂ ಹಗರಣವನ್ನು ಎಸ್.ಐ.ಟಿ. ತನಿಖೆ ನಡೆಸುತ್ತಿದ್ದು ಸಂಬಂಧ ಪಟ್ಟ ಸಚಿವರ ರಾಜಿನಾಮೆ ಪಡೆದು ಬಂಧನವು ಅಗಿದೆ. ಅದೇ ರೀತಿ ಮುಡಾ ಹಗರಣದ ಅರೋಪದ ಬಗ್ಗೆ ಇನ್ನು ಅರೋಪದ ವಾದ-ವಿವಾದಗಳು ನಡೆಯುತ್ತಿದೆ.ಅದರ ಬಗ್ಗೆ ತನಿಖೆ ನಡೆಸಲಿ ತಪ್ಪಿತಸ್ಥರೆಂದು ಸಾಭೀತಾದವರ ವಿರುದ್ದ ಕ್ರಮ ಕೈಗೊಳ್ಳಲಿ ಎಂದರು.
ಅದರೆ ಅರೋಪಗಳನ್ನು ಮಾಡಿದ ಮಾತ್ರಕ್ಕೆ ಮುಖ್ಯ ಮಂತ್ರಿಗಳು ರಾಜಿನಾಮೆ ನೀಡ ಬೇಕೆಂಬ ಹೋರಾಟದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತ ಪಡೆಸಿದರು,
ಜಿಲ್ಲಾ ಉಸ್ತುವಾರಿ ಸಚಿವರು ಕೆ.ಡಿ.ಪಿ. ಸಭೆಗಳನ್ನು ನಡೆಸಲು ಕೋಲಾರಕ್ಕೆ ಬರಲು ಸಿದ್ದರಿಲ್ಲ ಎಂದ ಮೇಲೆ ಬಲವಂತ ಮಾಡಲು ಸಾಧ್ಯವೇ ? ಅಭಿವೃದ್ದಿ ಬಗ್ಗೆ ಇಚ್ಚಾಶಕ್ತಿಯು ಇರ ಬೇಕು ಎಂದರು.
ರಾಜಕಾರಣವು ಚುನಾವಣೆಗೆ ಸೀಮಿತಗೊಳಿಸಿ ಜನರು ನಮಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಾಹಿಸಲು ಎಲ್ಲರೂ ಪರಸ್ಪರ ಸಹಕಾರ ನೀಡಿದರೆ ಮಾತ್ರ ಕ್ಷೇತ್ರದ ಅಭಿವೃದ್ದಿ ಕಾಣಲು ಸಾಧ್ಯ ಎಂದು ಹೇಳಿದರು, ಕೆ.ಜಿ.ಎಫ್ ಗಣಿಯ ಸೈನೆಡ್ ಮಣ್ಣಿನಲ್ಲಿ ಒಂದು ಟನ್‌ಗೆ ೦.೫ ಗ್ರಾಮ್ ಚಿನ್ನವು ಸಿಗಬಹುದೆಂದು ಈ ಹಿಂದೆ ಮಣ್ಣನ್ನು ಸಂಶೋಧಿಸಿರುವ ತಜ್ಞರಿಂದ ವರದಿಯನ್ನು ತಿಳಿದಿದ್ದೇನೆ. ಅದರೆ ಮಣ್ಣಿನ ಪರಿಷ್ಕರಣೆಯ ವೆಚ್ಚವು ಸಿಗಲಿರುವ ಚಿನ್ನಕ್ಕಿಂತ ದುಬಾರಿಯಾಗುವುದರಿಂದ ಸರ್ಕಾರವು ಯಾವೂದೇ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದರು.
ವಿಕಲಚೇತನರಿಗೆ ಮೂರು ಚಕ್ರದ ವಾಹನಗಳನ್ನು ವಿತರಿಸಲು ವಾಹನಗಳನ್ನು ಇಲಾಖೆಯವರು ತಂದು ೪ ತಿಂಗಳಾಗಿದೆ. ಅದರೆ ಅವರು ಸರ್ಕಾರದ ಶಿಷ್ಠಚಾರವನ್ನು ಪಾಲನೆ ಮಾಡ ಬೇಕು ಕ್ಷೇತ್ರದ ಶಾಸಕರು ಅವರಿಗೆ ವಿತರಣೆಯ ದಿನಾಂಕ ಹಾಗೂ ಸಮಯವನ್ನು ನೀಡದ ಕಾರಣ ವಾಹನಗಳು ವಿತರಿಸಿಲ್ಲ ಎಂದು ವ್ಯಂಗವಾಡಿದರು,