ಅತಿಥಿ ಉಪನ್ಯಾಸ
ಧಾರವಾಡ,ಜು.15: ಸರ್ವಜನರ ಹಿತ ಸಾಧನೆಯೇ ಸಮಾಜವಾದದಗುರಿ.ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಎಂಬ ನೀತಿ ಸಮಾಜವಾದದ್ದಾಗಿದೆಎಂದು ಪತ್ರಕರ್ತ ಪುಂಡಲೀಕ ಹಡಪದ ಹೇಳಿದರು. ಅವರುಕರ್ನಾಟಕ ವಿದ್ಯಾವರ್ಧಕ ಸಂಘವು. ದಿ. ರಾಚಪ್ಪ ಹಡಪದದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸಕಾರ್ಯಕ್ರಮದಲ್ಲಿಪ್ರಸ್ತುತರಾಜಕೀಯ ಹಾಗೂ ಸಮಾಜವಾದ’ ವಿಷಯಕುರಿತುಅತಿಥಿಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, 19ನೇ ಶತಮಾನದಲ್ಲಿ ಶ್ರಮಜೀವಿ ವರ್ಗದ ಮಹಾನ್ ನಾಯಕಕಾರ್ಲಮಾಕ್ರ್ಸಅವರು ಶೋಷಣೆರಹಿತ, ವರ್ಗರಹಿತ ನವಸಮಾಜ ನಿರ್ಮಾಣದ ಕನಸು ಕಂಡಿದ್ದರು.ಶೋಷಿತ ವರ್ಗಘನತೆಯಿಂದಜೀವನ ನಡೆಸಬೇಕೆಂಬ ಸಿದ್ಧಾಂತ ಉಳ್ಳವರಾಗಿದ್ದರು.ರಾಮ ಮನೋಹರ ಲೋಹಿಯಾ, ಕೋಣಂದೂರ ಲಿಂಗಪ್ಪ ಹಾಗೂ ಶಾಂತವೇರಿಗೋಪಾಲಗೌಡರು ಶ್ರೇಷ್ಠ ಸಮಾಜವಾದಿಗಳಾಗಿ ಶೋಷಿತರ, ಸಮಾಜದಕಟ್ಟಕಡೆಯ ವ್ಯಕ್ತಿಗಳ ಪರವಾಗಿಧ್ವನಿ ಎತ್ತಿ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟರು. ದಿ. ರಾಚಪ್ಪ ಹಡಪದ ನೇರ ನುಡಿಯ ನ್ಯಾಯ ನಿಷ್ಠುರದಅಪರೂಪದ ವ್ಯಕ್ತಿಗಳು ಎಂದು ಹೇಳಿದರು.
ಹಿರಿಯಚಿತ್ರಕಲಾವಿದ ಬಾಣದ ಮಾರುತಿ ಸನ್ಮಾನ ಸ್ವೀಕರಿಸಿ, ಮಾತನಾಡಿ, ಈ ದೇಶದಲ್ಲಿಜಾತಿಯತೆಎಂಬುದುಅಭಿವೃದ್ಧಿಗೆ ಮಾರಕವಾಗಿದೆ. ದಿ. ರಾಚಪ್ಪ ಹಡಪದಅವರುಎಲ್ಲಜಾತಿಯವರನ್ನು ಸಮಾನವಾಗಿಕಂಡವರು. ಬಸವಾದಿ ಶರಣರಕಾಯಕ ಹಾಗೂ ಸಮಾನತೆತತ್ವದಂತೆ ಬದುಕಿ, ತಮ್ಮ ಸತ್ಯಶುದ್ಧಕಾಯಕದಜೊತೆಗೆ ಸಮಾಜ ಸೇವೆ ಮಾಡಿದವರು.ಅಂತಹ ಸಮತಾವಾದಿಗಳಿಗೆ ಸರ್ಕಾರರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ಹೆಮ್ಮೆಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡಿ, ದಿ.ರಾಚಪ್ಪ ಹಡಪದಎಲ್ಲರನ್ನು ಪ್ರೀತಿಯಿಂದ ಸಮಾನವಾಗಿಕಾಣುತ್ತಿದ್ದ ವ್ಯಕ್ತಿ. ಧಾರವಾಡದ ಸಾಂಸ್ಕøತಿಕ ನಗರಕ್ಕೊಬ್ಬ ಹೆಮ್ಮೆಯ ವ್ಯಕ್ತಿಎಂದು ಹೇಳಿದರು.
ವೇದಿಕೆಯಲ್ಲಿದತ್ತಿದಾನಿ ರವಿರಾಜ ಹಡಪದಇದ್ದರು.ಡಾ. ಮಹೇಶ ಹೊರಕೇರಿ ಸ್ವಾಗತಿಸಿದರು.ವೀರಣ್ಣಒಡ್ಡೀನ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹಡಪದ, ಸೋಮಣ್ಣ ಹಡಪದ, ಶಾಂತವೇರಿ ಬೆಟಗೇರಿ, ಯೋಗೇಶ ಹಡಪದ, ಸೇರಿದಂತೆ ಹಡಪದ ಪರಿವಾರದವರುಇದ್ದರು.