ದಕ್ಷಿಣ ಏಷ್ಯಾ ತಂಡಕ್ಕೆ ಪವನ್ ಆಯ್ಕೆ
ಶಿಡ್ಲಘಟ್ಟ.ಜು.೧೫- ನಗರದ ಅಂಜನಾದ್ರಿ ಬಡಾವಣೆಯ ವಾಸಿ ಆರ್.ಅನಿಲ್ ಕುಮಾರ್ ಮತ್ತು ಮೀನಾಕ್ಷಿ ದಂಪತಿಗಳ ಮಗ ಪವನ್ ಕುಮಾರ್ ರಾಜ್ಯ, ರಾಷ್ಟ್ರಮಟ್ಟದ ಟಾರ್ಗೆಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಹೆಮ್ಮೆಯ ಪುತ್ರನಾಗಿದ್ದಾನೆ.
ನೇಪಾಳದ ಕಂಡುವಿನಲ್ಲಿ ಜುಲೈ ೮ರಿಂದ ೧೧ರವರೆಗೂ ನಡೆದ ದಕ್ಷಿಣ ಏಷ್ಯಾ ಟಾರ್ಗೆಟ್ ಬಾಲ್ ಚಾಂಪಿಯನ್ ಏನ್ ಶಿಪ್‌ನಲ್ಲಿ ಭಾರತ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದು ಈ ಚಾಂಪಿಯನ್ ಶಿಪ್ ಗೆದ್ದಿರುವುದಕ್ಕೆ ಕೋಚ್ ಶ್ರೀಧರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಎಂದು ಎ.ಪವನ್ ಕುಮಾರ್ ತಂದೆ ಅನಿಲ್ ಕುಮಾರ್ ತಿಳಿಸಿದರು.
ನೇಪಾಳದ ಕಲ್ಮಂಡುವಿನಲ್ಲಿ ನಡೆದ ದಕ್ಷಿಣ ಏಷ್ಯಾ ಟಾರ್ಗೆಟ್ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ ತಂಡದಲ್ಲಿ ಶಿಡ್ಲಘಟ್ಟದ -ಎ.ಪವನ್ ಕುಮಾರ್ ದೇಶವನ್ನು ಪ್ರತಿನಿಧಿಸುತ್ತದ್ದು ಟಾರ್ಗೆಟ್ ಬಾಲ್ ತಂಡದಲ್ಲಿ ಆರು ಮಂದಿ ಕ್ರೀಡಾಪಟುಗಳಿರುವ ಈ ಆಟದಲ್ಲಿ ಟಾರ್ಗೆಟ್ ಬಾಲ್ ಆಟವನ್ನು ಟಾರ್ಗೆಟ್ ರಿಂಗ್‌ಗೆ ಎಸೆಯುವ ಆಟವಾಗಿದೆ.
ಶಿಡ್ಲಘಟ್ಟ ನಗರದ ಎ.ಪವನ್ ಕುಮಾರ್ ರವರು ಪ್ರಾರಂಬಿಕ ಶಿಕ್ಷಣವನ್ನು ವಾಸವಿ ವಿದ್ಯಾಸಂಸ್ಥೆ ಮತ್ತು ಕಾಲೇಜು ಶಿಕ್ಷಣವನ್ನು ಡಾಲ್ವಿನ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಲಾಗಿದ್ದ ಪ್ರಸ್ತುತವಾಗಿ ರೇವಾ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ಇವರು ನಮ್ಮ ಭಾರತ ದೇಶವನ್ನು ಪ್ರತಿನಿಧಿಸಿ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಲಿ ಎಂದು ಅರಿಸೋಣ….