ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ
ಕೋಲಾರ.ಜು,೧೫-ರೋಟರಿ ಸಂಸ್ಥೆ ವಿಶ್ವದಾದ್ಯಂತ ಹಲವು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ. ಅದರಲ್ಲೂ ಶೈಕ್ಷಣಿಕ ಅತಿ ಹೆಚ್ಚು ಕಾರ್ಯಕ್ರಮಗಳನ್ನು ಶಿಕ್ಷಣದ ಪ್ರಗತಿಗೆ ಪ್ರೋತ್ಸಹಿಸುತ್ತ ಬಂದಿದೆ. ಈ ಶೈಕ್ಷಣಿಕ ಸಾಲಿನಲ್ಲೂ ಶಾಲಾ ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಪ್ರೋತ್ಸಹಿಸಲಾಗುವುದು ಎಂದು ಕೋಲಾರ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೋ. ನಾಗಾನಂದ ಕೆಂಪರಾಜ್ ನುಡಿದರು.
ಸುಪ್ರೀಂ ಸೇವಾ ಸಂಸ್ಥೆ ಮತ್ತು ರೋಟರಿ ಕ್ಲಬ್ ಕೋಲಾರ, ಇಂಡಿಯನ್ ಆಯಿಲ್ ಕಾರ್ಪೊರೇಷನ್ – ಪೈಪ್ ಲೈನ್ ವಿಭಾಗ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಶ್ರೀ ರಮಣ ಮಹರ್ಷಿ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಹಣ್ಣಿನ ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಮಣ ಮಹರ್ಷಿ ಶಾಲೆಯ ಶಿಕ್ಷಕರಾದ ರೋ ಬಿ. ಶಿವಕುಮಾರ್ ಮಾತನಾಡಿ ಸಹ ನಮ್ಮ ರೋಟರಿಯವರೆ ಆಗಿದ್ದು, ಇಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರಿಯಾಗಿದ್ದಾರೆ ಮತ್ತು ಸುಪ್ರೀಂ ತಾನು ವಿಶೇಷ ಚೇತನರಾಗಿದ್ದರು ಸಹ ಮತ್ತೊಬ್ಬರಿಗೆ ಸಹಾಯ ಮಾಡುವ ಮನಸ್ಸಿನವರು ಆದ್ದರಿಂದ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಲಿ, ನಾವೆಲ್ಲರೂ ಪ್ರೋತ್ಸಹಿಸೋಣ ಎಂದರು.
ಸುಪ್ರೀಂ ಸೇವಾ ಸಂಸ್ಥೆಯ ಸುಪ್ರೀಂ ಮಾತನಾಡಿ ಶ್ರೀ ರಮಣ ಮಹರ್ಷಿ ವಿದ್ಯಾಲಯ ನಮ್ಮ ಶಾಲೆ ಇದ್ದ ಹಾಗೆ ಇಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಶಿಕ್ಷಣಕ್ಕೆ ಹಾಗೂ ಮೂಲಭೂತ ಸೌಲಭ್ಯಗಳು ಏನೇ ಅಗತ್ಯವಿದ್ದರು ಸಹ ನಾವು ನಮ್ಮ ಸುಪ್ರೀಂ ಸೇವಾ ಸಂಸ್ಥೆಯಿಂದ ಸಹಕರಿಸುತ್ತೇವೆ ಎಂದರು.
ಅಕ್ಷರ ವಿಜಯ ಮಾಸ ಪತ್ರಿಕೆ ಸಂಪಾದಕರಾದ ಡಾ. ಪೋಸ್ಟ್ ನಾರಾಯಣಸ್ವಾಮಿ ಮಾತನಾಡಿ ಮಕ್ಕಳಿಗೆ ಬಸವಾದಿ ಶರಣರ ವಚನಗಳನ್ನು ಕಲಿಸಿಕೊಟ್ಟರು.
ಕ.ಸಾ.ಪ. ತಾಲ್ಲೂಕು ಗೌರವಾಧ್ಯಕ್ಷರಾದ ಟಿ.ಸುಬ್ಬರಾಮಯ್ಯ ನವರು ಮಾತನಾಡುತ್ತ ದಾನಿಗಳು ನೀಡಿದ ಪರಿಕರಗಳು ಉಪಯೋಗವಾಗಲಿ, ವಿದ್ಯಾರ್ಥಿಗಳು ಇದನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಮುಂದುವರೆಯಲಿ ಎಂದರು.
ಇದೇ ಸಂದರ್ಭದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಪೈಪ್ ಲೈನ್ ವಿಭಾಗ ಸಿಬ್ಬಂದಿ ವರ್ಗ ಮ್ಯಾನೇಜರ್ ರಾಜಂಷ ರಂಜಿ, ಪ್ರೀತಮ್, ಮುರಳೀಧರ ರವರು ಶಾಲೆಗೆ ಮತ್ತು ಪ್ರತಿ ವಷದಂತೆ ಸ್ವರ್ಣಭೂಮಿ ಫೌಂಡೇಷನ್ ಆಯೋಜಿಸುವ ಆದಿವಾಸಿ ಮಕ್ಕಳಿಗೆ ಹಾಗೂ ಹೆಚ್ ಡಿ ಕೋಟೆ ಗಡಿಭಾಗದ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಬಿ. ಶಿವಕುಮಾರ್ ರವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ರೊ. ಪಿ.ಎಂ .ಶಂಕರ್ ಪ್ರಸಾದ್, ರೊ.ಬಿ.ಶಿವಕುಮಾರ್, ಶಾಂತಿನಿಕೇತನ ಸೇವಾ ಸಂಸ್ಥೆಯ ಪ್ರಶಾಂತ್ ಕುಮಾರ್, ತಾಯಲೂರು ಡಿಜಿಟಲ್ ಸಖಿ ಹಾಗೂ ಸ್ವರ್ಣಭೂಮಿ ಫೌಂಡೇಷನ್ ಸಂಸ್ಥೆಯ ಸದಸ್ಯರಾದ ನಂದಿನಿ, ಸಾಮಾಜಿಕ ಕಾರ್ಯಕರ್ತ ರವೀಂದ್ರನಾಥ್, ಮುಖ್ಯ ಶಿಕ್ಷಕರಾದ ಎಂ. ಪ್ರಕಾಶ್, ಸಹ ಶಿಕ್ಷಕರಾದ ಶಂಕರ್ ನಾಗ್, ಮುರಳೀಧರ, ರೇಖಾಮಣಿ, ಶ್ವೇತಾ, ವನಿತಾ ಭಾಗವಹಿಸಿದ್ದರು.