ಅಪರಾಧಗಳ ತಡೆಯಬೇಕಾದರೆ ಪೊಲೀಸ್‌ ಇಲಾಖೆಯೊಂದಿಗೆ ಗ್ರಾಮಸ್ಥರ ಸಹಕಾರ ಅತ್ಯಗತ್ಯ
ಸಂಜೆವಾಣಿ ವಾರ್ತೆ
ಹರಿಹರ ಜೂ 14;  ಜನಸಾಮಾನ್ಯರ ಸಮಸ್ಯೆ ಆಲಿಸಿ, ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಆರಂಭಿಸಿರುವ ಜನ ಸಂಪರ್ಕ ಸಭೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದು ವೃತ್ತ ನಿರೀಕ್ಷಕ ಸುರೇಶ್ ಸಗರಿ ಹೇಳಿದರು ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ದಾವಣಗೆರೆ ಗ್ರಾಮಾಂತರ ವಿಭಾಗ ಹರಿಹರ ವೃತ್ತ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಇಲಾಖೆ, ಇವರ ಆಶ್ರಯದಲ್ಲಿ ಜನಾ ಸಂಪರ್ಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದವರು  ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆ ನೂತನ ಕಾನೂನುಗಳ ಸ್ವತ್ತಿನ   ಅಪರಾಧಗಳ ತಡೆಗಟ್ಟುವಿಕೆ ಆನ್ಲೈನ್ ವಂಚನೆ ಮಕ್ಕಳ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹಿರಿಯ ನಾಗರಿಕರ ರಕ್ಷಣೆ ರಸ್ತೆ ಅಪಘಾತಗಳ ನಿಯಂತ್ರಣ ಮಾದಕ ವಸ್ತು ದುಶ್ಚಟಗಳ ಬಗ್ಗೆ ಬಾಲ್ಯ ವಿವಾಹ ತನಿಕ ಪ್ರಕ್ರಿಯೆ 112 ವಾಹನ ಮುಂತಾದ ಕಾನೂನು ಹರಿವು ಬಗ್ಗೆ ಜಾಗೃತಿ ಮೂಡಿಸಿದರು.ಅಪರಾಧಗಳನ್ನು ತಡೆಯಬೇಕಾದರೆ ಪೊಲೀಸ್‌ ಇಲಾಖೆಯೊಂದಿಗೆ ಗ್ರಾಮಸ್ಥರ ಸಹಕಾರ ಅತ್ಯಗತ್ಯ. ಯಾವುದೇ ಸಮಸ್ಯೆ, ದೂರುಗಳಿದ್ದರೆ ನೇರವಾಗಿ ಠಾಣೆಗೆ ಬಂದು ಕೊಡಿ. ನಿಮ್ಮ ದೂರುಗಳನ್ನು ಆಲಿಸಲು ನಾವಿದ್ದೇವೆ. ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ ಪೊಲೀಸರು ಮತ್ತು ಜನರ ನಡುವೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯನ್ನಾಗಿ ಮಾಡುವ ದಷ್ಟಿಯಿಂದ ಪ್ರತಿ ಗ್ರಾಮದಲ್ಲೂ ಪೊಲೀಸ್ ಠಾಣೆಯಿಂದ ಜನ ಸಂಪರ್ಕ ಸಭೆಯನ್ನು ಮಾಡಲಾಗುತ್ತೆ ಇದರ ಪ್ರಯೋಜನವನ್ನು ಸಾರ್ವಜನಿಕರು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಹೇಳಿದರು
