ಆಶಾ ಕಾರ್ಯಕರ್ತರೆಂದರೆ ಸರ್ಕಾರಿಗಳಿಗೆ ತಾತ್ಸರ ಏಕೆ -:  ಮಂಜುನಾಥ್ ಕೈದಾಳೆ
ಸಂಜೆವಾಣಿ ವಾರ್ತೆ
ಜಗಳೂರು.ಜು.೧೫; ಆಶಾಕಾರ್ಯರ್ತರು ಎಂದರೆ ಸರ್ಕಾರಗಳು ತಾತ್ಸರ ಮನೋಭಾವ ತೋರುತ್ತವೆ ಎಂದು ಕೈದಾಳೆ ಮಂಜುನಾಥ ಸರ್ಕಾರಗಳ ವಿರುದ್ಧವಾಗಿ ಕಿಡಿಕಾರಿದರು. ಪಟ್ಟಣ ಪಂಚಾಯಿತಿ ಆವರಣದಲ್ಲಿ ಎಐಯುಟಿಯುಸಿಯ ವತಿಯಿಂದ ತಾಲೂಕು ಮಟ್ಟದ ಪ್ರಥಮ ಆಶಾ ಕಾರ್ಯಕರ್ತರ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಸರ್ಕಾರಗಳು ಆಧಿಕಾರಿಗಳು ಆಶಾ ಕಾರ್ಯಕರ್ತರಲ್ಲಿ ಇಲ್ಲ ಸಲ್ಲದ ಕೆಲಸಗಳನ್ನು ಮಾಡಿಸಿಕೊಂಡು ಅಲ್ಪ ಸಂಬಳ ನೀಡುತ್ತಿದ್ದು, ಪರಿಶ್ರಮಕ್ಕೆ ತಕ್ಕ ಸಂಬಳ ನೀಡದೆ ಆಶಾಗಳೆಂದರೆ ತಾತ್ಸರವೆಕೆ ಎಂದು ಪ್ರಶ್ನಿಸಿದರು.