ಯುಪಿಎಸ್ಸಿ ಸಾಧಕಿ ಸೌಭಾಗ್ಯ ಶರಣಯ್ಯ ಸ್ವಾಮಿ ಬೀಳಗಿಮಠಗೆ ಸನ್ಮಾನ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೫; ದೆಹಲಿಯ ಸಂಕಲ್ಪ ಸಂಸ್ಥೆಯವರ ವತಿಯಿಂದ ಅಯೋಧ್ಯೆಯಲ್ಲಿ ನಡೆದ ಗುರು ಸನ್ಮಾನ ಕಾರ್ಯಕ್ರಮದಲ್ಲಿ  ಯುಪಿಎಸ್ಸಿಯಲ್ಲಿ ಸಾಧನೆ ಮಾಡಿರುವ ದಾವಣಗೆರೆಯ ಸೌಭಾಗ್ಯ ಶರಣಯ್ಯ ಸ್ವಾಮಿ ಬೀಳಗಿಮಠ ಅವರಿಗೆ ಸನ್ಮಾನಿಸಲಾಯಿತು.ಕೇಂದ್ರ ಸಚಿವರಾದ ಹರ್ಷ ಮಲ್ಹೋತ್ರ ಅವರು ಸೌಭಾಗ್ಯ ಶರಣಯ್ಯ ಸ್ವಾಮಿ ಬೀಳಗಿಮಠ ಇವರನ್ನು ಸೇರಿದಂತೆ ದೇಶದ ವಿವಿಧ ಪ್ರತಿಭಾವಂತ ಯುಪಿಎಸ್ಸಿ ಸಾಧಕರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ. ಜಿ ಪ್ರಸನ್ನಕುಮಾರ್, ದೆಹಲಿಯ ಉದ್ಯಮಿ ಅಭಿಷೇಕ್ ಗರ್ಗ್, ಪೋಷಕರಾದ ಶರಣಯ್ಯ ಸ್ವಾಮಿ, ಶರಣಮ್ಮ, ಸಹೋದರ ರೇಣುಕ ಪ್ರಸಾದ್, ರಾಜಶೇಖರ್ ಮಠದ್, ರಾಮ ಜನ್ಮಭೂಮಿ ಟ್ರಸ್ಟಿನ ಚಂಪಕ್ಕರಾಯ್ ಛತ್ತೀಸ್ ಘಡದ ಸಚಿವ ಯುಪಿ ಚೌದ್ರ, ಉತ್ತರ ಪ್ರದೇಶ ಸಚಿವ ಯೋಗೇಂದ್ರ ಉಪಾಧ್ಯ,ಉತ್ತರ ಪ್ರದೇಶ ಮಾಜಿ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಇತರರು ಉಪಸ್ಥಿತರಿದ್ದರು