ಅಂಬೇಡ್ಕರ್ ತತ್ವ ಅಳವಡಿಸಿಕೊಳ್ಳಿ: ಅಲ್ಲಮಪ್ರಭು
ಕಲಬುರಗಿ,ಜು.14-ಇಂದಿನ ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಕರೆ ನೀಡಿದರು.
ನಗರದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜಿನಲ್ಲಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಸ್ಮರಣಾರ್ಥ 2023-24 ನೇಯ ಶೈಕ್ಷಣಿಕ ಸಾಲಿನ ಎನ್.ಎಸ್.ಎಸ್., ಎನ್.ಸಿ.ಸಿ. ರೇಂಜರ್ಸ್ ಮತ್ತು ರೋವರ್ಸ್ ಘಟಕಗಳು ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್, ಕ್ರೀಡಾ ಸಾಂಸ್ಕøತಿಕ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಡಾ.ಬಲಭೀಮ ಸಾಂಗ್ಲಿ ಅವರು ಬರೆದಿರುವ ಇಂಡಿಯನ್ ಇಂಗ್ಲೀಷ್ ಶಾರ್ಟ ಸ್ಟೋರಿ 1975- 2000 ಎ ಕ್ರಿಟಿಕಲ್ ಸರ್ವೆ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಚಲನಚಿತ್ರ ನಟ ಚೇತನಕುಮಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಬುದ್ಧ ಬಸವ ಅಂಬೇಡ್ಕರವರ ತತ್ವಗಳು ಮೂಲ ಪ್ರೇರಣೆಯಾಗಬೇಕು ಮತ್ತು ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಯಶಸ್ಸು ಕಾಣಬೇಕೆಂದರು.
ತದನಂತರ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ವಿದ್ಯಾರ್ಥಿಗಳನ್ನು ತಮ್ಮ ಹಾಸ್ಯ ಚಟಾಕಿಗಳ ಮೂಲಕ ಮನರಂಜಿಸಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅವರು ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಯ ಚರಿತ್ರೆಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಟಿ.ವಿ.ಅಡಿವೇಶ, ಡಾ.ಮಲ್ಲೇಶಪ್ಪ ಎಸ್.ಕುಂಬಾರ, ಡಾ.ವಿಜಯಕುಮಾರ ಸಾಲಿಮನಿ, ಡಾ.ರಾಜಕುಮಾರ ಸಲಗರ, ಡಾ.ವಿನೋದಕುಮಾರ ರಾಠೋಡ, ಡಾ.ರಾಜಶೇಖರ ಮಡಿವಾಳ, ಡಾ.ವಿಜಯಾನಂದ ವಿಠಲರಾವ್ ರವರು ಉಪಸ್ಥಿತರಿದ್ದರು.
ವಿವಿಧ ಕಾಲೇಜಿನಿಂದ ಆಗಮಿಸಿದ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿತೇರ ವರ್ಗದವರು ಹಾಗೂ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್. ಅಂಬೇಡ್ಕರ ಸ್ಮರಣಾರ್ಥವಾಗಿ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಮತ್ತು ಬಹುಮಾನವನ್ನು ವಿತರಿಸಲಾಯಿತು.
ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಸಮಿತಿಯ ಸಂಚಾಲಕÀ ಡಾ.ಚಂದ್ರಕಾಂತ ಜಮಾದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕÀ ಡಾ.ಬೆಣ್ಣೂರ ವಿಶ್ವನಾಥ, ಡಾ.ಭುವನೇಶ್ವರಿ, ಡಾ.ರೇಖಾ ಅಣ್ಣಿಗೇರಿ, ಡಾ.ಶ್ರೀಮಂತ ಹೋಳಕರ, ಪೆÇ್ರ.ಮೇರಿ ಮಧೂಸ್, ಡಾ.ನಾಗಪ್ಪ ಟಿ. ಗೋಗಿ, ಡಾ. ರವಿ ಬೌದ್ದೆ, ಡಾ.ಶಿವಲಿಂಗಪ್ಪ ಪಾಟೀಲ, ಪೆÇ್ರ.ದಿನೇಶ ಮೇತ್ರೆ, ಪೆÇ್ರ.ಭೀಮರಾಯ ಕೋತಲೆ, ಡಾ.ವಿಜಯಕುಮಾರ ಗೋಪಾಳೆ, ಪೆÇ.್ರ ಗೌಶಿಯಾ ಬೇಗಂ, ಡಾ.ನಶಿಮ ಫಾತಿಮಾ, ಡಾ.ಸುಹಾಸಿನಿ ಬಿ., ಡಾ.ಅರುಣಕುಮಾರ ಸಲಗರ, ಡಾ.ಶಾಮಲಾ ಸ್ವಾಮಿ, ಅಜಯಸಿಂಗ ತಿವಾರಿ, ಶಿವಾನಂದ ಸ್ವಾಮಿ ಉಪಸ್ಥಿತರಿದ್ದರು.
ಇದಲ್ಲದೆ ಕಾಲೇಜಿನ ಡಾ. ಬಿ.ಆರ್. ಅಂಬೇಡ್ಕರ ಸಮಿತಿಯ ಎಲ್ಲಾ ಸದಸ್ಯರು ಮಹಾವಿದ್ಯಾಲಯದ ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳು ಮತ್ತು ಕಾಲೇಜಿನ ಯು.ಜಿ-ಪಿ.ಜಿ. ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಡಾ.ಅನುಸುಯಾ ಗಾಯಕವಾಡ ಪ್ರಾರ್ಥನೆ ಗೀತೆ ಹಾಡಿದರು. ಡಾ.ವಿಜಯಕುಮಾರ ಸಾಲಿಮನಿ ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಡಾ.ರಾಜಕುಮಾರ ಸಲಗರ ಅತಿಥಿ ಪರಿಚಯ ಮಾಡಿದರು. ಡಾ.ಸುರೇಶ ಎಸ್. ಮಾಳೇಗಾಂವ ನಿರೂಪಿಸಿದರು. ಡಾ.ಶ್ರೀಮಂತ ಹೊಳ್ಳರ್ ವಂದಿಸಿದರು.