ಭಕ್ತಿಯ ಪರಾಕಾಷ್ಠೆಯಲ್ಲಿ ಮೊಳಗಿದ ಶ್ರೀ ಖಾಸ್ಗತ ಭಕ್ತ ವೃಂದ!
ತಾಳಿಕೋಟೆ:ಜು.14: ರಾಜ್ಯದ ಪ್ರಮುಖ ಮಠಗಳಲ್ಲಿಯೂ ಅತ್ಯಂತ ಪ್ರಸಿದ್ದತೆ ಪಡೆದುಕೊಂಡಿರುವ ತಾಳಿಕೋಟೆ ಶ್ರೀ ಖಾಸ್ಗತೇಶ್ವರ ಮಠಕ್ಕೆ ಜಾತ್ರೋತ್ಸವ ನಿಮಿತ್ಯ ಪ್ರಾರಂಭಗೊಂಡಿರುವ ಸಪ್ತಭಜನೆಯ ಕಾರ್ಯದಲ್ಲಿ ಪಾಲ್ಗೊಳ್ಳಲು ಗ್ರಾಮೀಣ ಭಾಗದ ಭಕ್ತರು ಪಾದಯಾತ್ರೆಯ ಮೂಲಕ ಶಿವಭಜನೆಯೊಂದಿಗೆ ಆಗಮಿಸುತ್ತಿದ್ದಾರೆ.
ಈ ಹಿಂದೆ ಶ್ರೀ ಖಾಸ್ಗತರು ಪಂಡರಾಪೂರಕ್ಕೆ ಹೋದಾಗ ಆಷಾಡ ಏಕಾದಶಿಯ ದಿನದಂದು ಶ್ರೀ ವಿಠ್ಠಲನ ದರ್ಶನದಲ್ಲಿದ್ದಾಗ ಗೋಪಾಲ ಕಾವಲಿ(ಮೊಸರುಗಡಿಗೆ) ಒಡೆಯುವದನ್ನು ಕಂಡ ಶ್ರೀ ಖಾಸ್ಗತರು ತಮ್ಮ ಮಠದಲ್ಲಿಯೂ ಈ ಕಾರ್ಯ ಪ್ರಾರಂಬಿಸಿದರೆ ಭಕ್ತರಿಗೆ ಒಳಿತು ಆದೀತೆಂಬ ಇಚ್ಚೆಯೊಂದಿಗೆ ನೂರಾರು ವರ್ಷಗಳ ಹಿಂದೆ ಸಪ್ತ ಭಜನೆ ಮುಕ್ತಾಯದ ಆಶಾಡ ಏಕಾದಶಿಯ ದಿನದಂದು ಗೋಪಾಲ ಕಾವಲಿ(ಮೊಸರುಗಡಿಗೆ) ಒಡೆಯುವ ಸಂಪ್ರದಾಯವನ್ನು ಜೋಡಿಸಿದರು ಎಂಬುದು ಪ್ರತಿಥಿಯಲ್ಲಿದೆ.
ಈ ಗೋಪಾಲ ಕಾವಲಿ(ಮೊಸರುಗಡಿಗೆಯಲ್ಲಿ) ಹಾಲು, ತುಪ್ಪ, ಬಾಳೆಹಣ್ಣು, ಅಲ್ಲದೇ ಇನ್ನಿತರ ಪ್ರಸಾದ ಸೇರಿಸಿ ಆಶಾಡ ಏಕಾದಸಿಯ ಒಂದು ದಿನ ಮುಂಚೆ ರಾತ್ರಿಹೊತ್ತು ಈ ಗಡುಗೆಯನ್ನು ಕಟ್ಟಲಾಗುತ್ತದೆ ಮರುದಿನ ಈ ಮೊಸರು ಗಡೆಗೆ ಗೋಪಾಲ ಕಾವಲಿ ಒಡೆಯುವ ಕಾರ್ಯ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಸುಕಿನ ಜಾವ 5-30 ಗಂಟೆಗೆ ಜರುಗುತ್ತದೆ.
ಈ ಗೋಪಾಲ ಕಾವಲಿ ಮೊಸರು ಗಡಿಗೆಯಿಂದ ಬಿಳ್ಳುವ ಪ್ರಸಾದ ಭಕ್ತರ ಮೇಲೆ ಬಿದ್ದರೆ ಮತ್ತು ಆ ಗಡಿಗೆಯ ಚೂರು ಭಕ್ತರಿಗೆ ದೊರೆತರೆ ಅವರು ಮನೆಯು ಸಂಪದ್ಬರಿತವಾಗಿ ಸದಾ ಸಂತೋಷದಿಂದ ತುಂಬಿ ತುಳುಕುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ ಅದರಂತೆ ಅಂದು ನಸುಕಿನ ಜಾವ ಸಾವಿರಾರು ಸಂಖ್ಯೆಯಲ್ಲಿ ಸೇರುವ ಭಕ್ತರು ಶ್ರೀ ಮಠದಲ್ಲಿ ಓಂ ನಮಃ ಶಿವಾಯ ಎಂಬ ನಾಮಾಂಕಿತವನ್ನು ಜಪಿಸುತ್ತಾ ಭಕ್ತಿಯಿಂದ ಶ್ರೀ ಖಾಸ್ಗತರನ್ನು ನೆನೆಯುತ್ತಾರೆ ಅಂದು ಭಕ್ತರು ಬೇಡಿಕೆಕೊಳ್ಳುವ ಎಲ್ಲ ಬಯಕೆಗಳು ಇಡೇರುತ್ತಾ ಸಾಗಿದ್ದರಿಂದ ವರ್ಷದಿಂದ ವರ್ಷಕ್ಕೆ ಶ್ರೀ ಮಠದ ಜಾತ್ರೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾ ಸಾಗಿದ್ದಾರೆ.
ಸಪ್ತ ಭಜನೆಯ ಕಾರ್ಯದಲ್ಲಿ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಭಕ್ತರಿಗೂ ಅವಕಾಶ ಸಿಗಲಿ ಎಂಬ ಕಾರಣದಿಂದ ಒಂದು ದಿನಕ್ಕೆ ಕೇವಲ ಒಂದು ತಾಸು ಪ್ರತಿ ಗ್ರಾಮಸ್ಥರಿಗೆ ಹಂಚಿಕೆ ಮಾಡಲಾಗಿದ್ದು ಈ ಸಪ್ತ ಭಜನೆಯ ಕಾರ್ಯದಲ್ಲಿ ಸುಮಾರು 160 ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಅವಕಾಶ ಸಿಕ್ಕಿದ್ದು ಪ್ರತಿದಿನ ತಮ್ಮ ತಮ್ಮ ಗ್ರಾಮಗಳಿಂದ ಗ್ರಾಮದ ತಂಡಗಳು ಪಾದಯಾತ್ರೆಯ ಮೂಲಕ ಶಿವ ಭಜನೆಯ ಓಂ ನಮಃ ಶಿವಾಯ ಎಂಬ ನಾಮಾಂಕಿತ ಜಪಿಸುತ್ತಾ ಆಗಮಿಸುತ್ತಿರುವದು ಶ್ರೀಖಾಸ್ಗತರ, ವಿರಕ್ತಶ್ರೀಗಳ ಮೇಲಿನ ಭಕ್ತಿ ಭಕ್ತರಲ್ಲಿ ಇನ್ನಷ್ಟು ಇಮ್ಮಡಿಗೊಳಿಸುತ್ತಾ ಸಾಗಿದೆ.