ಬಿಎಲ್‍ಡಿಇ ಆಸ್ಪತ್ರೆಗೆ ದೇಹದಾನ
ವಿಜಯಪುರ,ಜು.14: ನಗರದ ವಿಶ್ವೇಶ್ವರಯ್ಯ ಕಾಲೋನಿ ನಿವಾಸಿ ರಾವುತಪ್ಪ ರಾಯಗೊಂಡಪ್ಪ ಪಾಟೀಲ (83) ಅವರು ಶುಕ್ರವಾರ ನಿಧನರಾಗಿದ್ದು, ಮೃತರ ಅಂತಿಮ ಇಚ್ಚೆಯಂತೆ ಅವರ ಕುಟುಂಬಸ್ಥರು ನಗರದ ಬಿ. ಎಲ್. ಡಿ. ಇ ಆಸ್ಪತ್ರೆಗೆ ದೇಹದಾನ ಮಾಡಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಾವುತಪ್ಪ ಪಾಟೀಲ ಅವರು ತಮ್ಮ ನಿಧನಾನಂತರ ದೇಹವನ್ನು ಬಿ, ಎಲ್. ಡಿ. ಇ ಆಸ್ಪತ್ರೆಗೆ ದಾನ ಮಾಡಬೇಕು ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು.
ಮೃತರ ಇಚ್ಚೆಯಂತೆ ರಾವುತಪ್ಪ ಪಾಟೀಲ ಪರಿವಾರದವರು ಬಿ.ಎಲ್.ಡಿ.ಇ ಆಸ್ಪತ್ರೆಗೆ ದೇಹದಾನ ಮಾಡಿದರು. ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆರ್.ಎಸ್. ಬುಲಗೌಡ ದೇಹವನ್ನು ಸ್ವೀಕರಿಸಿ ರಾವುತಪ್ಪ ಪಾಟೀಲ ಅವರ ಕುಟುಂಬ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.