ಶಾಂತಿನಿಕೇತನ: ಶಾಲಾ ಸಂಸತ್ತಿನ ಪ್ರತಿಜ್ಞಾ ವಿಧಿ
ವಿಜಯಪುರ,ಜು.14:ಶಾಂತಿನಿಕೇತನ ಸಿ.ಬಿ.ಎಸ್.ಇ. ಶಾಲೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಶೈಕ್ಷಣಿಕ ವರ್ಷದ ವಿವಿಧ ವಿಭಾಗದ ನಾಯಕ-ನಾಯಕಿಯರಿಗೆ ವಿಜಯಪುರದ ಡಿ.ವಾಯ್.ಎಸ್.ಪಿ. ಬಸವರಾಜ ಯಲಿಗಾರ ಅವರು ಬ್ಯಾಡ್ಜ್ ನೀಡಿ ಜವಾಬ್ದಾರಿಗಳ ಬಗ್ಗೆ ಮಾತನಾಡಿದರು.
ವಿದ್ಯಾರ್ಥಿಗಳು ನಾಯಕತ್ವದ ಗುಣ ಮೈಗೂಢಿಸಿಕೊಂಡು ನಾಗರಿಕ ಪ್ರಜ್ಞೆಯನ್ನು ಬೆಳಸಿಕೊಳ್ಳಬೇಕೆಂದು ಶಾಂತಿನಿಕೇತನ ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರ ಅವರು ನುಡಿದರು.
ಶಾಲೆಯ ಪ್ರಾಂಶುಪಾಲ ರಿಜೇಶ ಪಿ.ಎನ್ ಅವರು ನಾಯಕತ್ವವನ್ನು ವಹಿಸಿಕೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ಮ್ನ ಬೋಧಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ. ಸುರೇಶ ಬಿರಾದಾರ, ನಿರ್ದೇಶಕರಾದ ಶರತ ಬಿರಾದಾರ ಹಾಗೂ ಶಾಲೆಯ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.