ಆಡಳಿತ ವ್ಯವಸ್ಥೆಗೆ ನಾಯಕತ್ವ ಬೇಕು:ಸಿದ್ದಲಿಂಗಶ್ರೀ
ತಾಳಿಕೋಟೆ:ಜು.14: ಯಾವುದೇ ಆಡಳಿತ ನಡೆಯಬೇಕಾದರೆ ನಾಯಕತ್ವ ಎಂಬುದು ಬೇಕು ಆ ನಾಯಕತ್ವವೆಂಬುದು ಇರದಿದ್ದರೆ ಜವಾಬ್ದಾರಿ ಇದ್ದಂತಹ ಕೆಲಸಗಳು ಗುರಿ ತಲುಪಲು ಸಾದ್ಯವಿಲ್ಲಾವೆಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.
ಶನಿವಾರರಂದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ, ಹಾಗೂ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾದ ಶಾಲಾ ಸಂಸತ್ತು ರಚನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಸಂಸತ್ತು ಚುನಾವಣೆಯನ್ನು ಮತ ಚಲಾಯಿಸುವ ಮುಖಾಂತರ ವಿದ್ಯಾರ್ಥಿಗಳ ಪ್ರಶ್ನೇಗಳಿಗೆ ಉತ್ತರಸಿದ ಶ್ರೀಗಳು ಇಂದು ಸಂಸತ್ತು ಚುನಾವಣೆಯಲ್ಲಿ ಯಾವ ಮಾದರಿಯಲ್ಲಿ ಮತದಾನ ಪದ್ದತಿ ಅನುಸರಿಸಿದೆಯೋ ಇದೇ ರೀತಿ ವಿದಾನಸಭೆ, ಲೋಕಸಭೆ ಹಾಗೂ ಪುರಸಭೆ ಇನ್ನಿತರ ಸರ್ಕಾರದಿಂದ ನಡೆಸಲಾಗುತ್ತಿರುವ ಚುನಾವಣೆಗಳನ್ನು ನಡೆಸಿ ಅದಕ್ಕೆ ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು. ಯಾವ ರೀತಿ ಕ್ರೀಕೇಟ್‍ದಲ್ಲಿ ಕ್ಯಾಪ್ಟನ್‍ನ್ನು ಆಯ್ಕೆ ಮಾಡಲಾಗುತ್ತದೆಯೋ ಅದೇ ರೀತಿ ಸಂಸತ್ತು ಚುನಾವಣೆಯಲ್ಲಿಯೂ ಸಂವಿದಾನದಿಂದ ಜಾತಿ ಮತ ಪಂಥಗಳನ್ನು ಬದಿಗೊತ್ತಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಾರೋ ಅಂತವರನ್ನು ಆಯ್ಕೆ ಮಾಡುವದೇ ಪ್ರಜಾಪ್ರಭುತ್ವದ್ದಾಗಿದೆ ಅಂತಹ ಮಹತ್ವದ ಕಾರ್ಯವನ್ನು ಮಾಡಿದ ಈ ಶಾಲಾ ಶಿಕ್ಷಕರ ಶಿಕ್ಷಕಿಯರ ಕಾರ್ಯ ಮಹತ್ವದ್ದಾಗಿದೆ ಎಂದು ಹೇಳಿದ ಶ್ರೀಗಳು ಪತ್ರಕರ್ತರ ಸ್ಥಾನದಲ್ಲಿ ನಿಂತು ಪ್ರಶ್ನೇ ಕೇಳಿದ ವಿದ್ಯಾರ್ಥಿಯಾದ ಆಕಾಶ ಭುಸಾರೆ ಪ್ರಶ್ನೇಗೂ ಸಹ ಸಮರ್ಪಕ ಉತ್ತರ ನೀಡಿ ವಿದ್ಯಾರ್ಥಿಗಳಿಗೆ ಆಶಿರ್ವದಿಸಿದರು.
ಮುಖ್ಯ ಗುರುಗಳಾದ ಶ್ರೀಮತಿ ಲಕ್ಷ್ಮೀ ಮಣೂರ, ಶ್ರೀಮತಿ ಗೀತಾ ಹಿರೇಮಠ, ಆಡಳಿತಾಧಿಕಾರಿ ಎಸ್.ಎ.ಶರಣರ, ಶಿಕ್ಷಕರಾದ ವಿಜಯಲಕ್ಷ್ಮೀ ದೊಡಮನಿ, ಅಮೃತಾ ಹಜೇರಿ, ಪರಶುರಾಮ ಪಡಸಾಲಿ, ಅಮೀನಾ ಮಕಾಂದಾರ, ಕೀರ್ತಿ ಹಿರೇಮಠ, ಸವಿತಾ ಹಿರೇಮಠ, ಶಿವಲೀಲಾ ಸಜ್ಜನ, ರೇಖಾ ಧಶರಥ್, ಮಾಳಿಂಗರಾಯ ಪೂಜಾರಿ, ಮೊದಲಾದವರು ಇದ್ದರು.
ವಿಜಯಲಕ್ಷ್ಮೀ ದೊಡಮನಿ ಸ್ವಾಗತಿಸಿದರು. ಅಶ್ವೀನಿ ಕೊಡೇಕಲ ನಿರೂಪಿಸಿ ವಂದಿಸಿದರು.