ಬಿಜನಳ್ಳಿ ಗ್ರಾಮಕ್ಕೆ ಭೇಟಿ ನೀಡಿದ:ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಸೇಡಂ, ಜು,14: ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ರವರು ನಿನ್ನೆ ಸಂಜೆ ತಾಲೂಕಿನ ಸುಕ್ಷೇತ್ರ ಬಿಜನಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ಇತ್ತೀಚೆಗೆ ವಿಧಿವಶರಾದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗೌಡಪ್ಪ ಗೌಡ ಮಾಲಿ ಪಾಟೀಲ್ ಹಾಗೂ ಶಾಮರಾಯ ಪೆÇೀಲಿಸ್ ಪಾಟೀಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದರು. ಹಣಮಂತರಾವ್ ಪೆÇೀಲಿಸ್ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ ಸಚಿವರು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಹೋಗಿ, ನಾನು ಹೇಳುವೆ ಎಂದು ತಿಳಿಸಿದರು. ನಂತರ ಹರಳಯ್ಯ ಕಲ್ಯಾಣಮ್ಮನವರ ಚಮ್ಮಾವುಗೆಗಳ ದರ್ಶನ ಪಡೆದ ಸಚಿವರು ಯಾತ್ರಿ ನಿವಾಸದ ಕೊನೆ ಹಂತದ ಕಾಮಗಾರಿ ವೀಕ್ಷಿಸಿದರು. ಗ್ರಾಮದ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದ ಗ್ರಾಮಸ್ಥರು , ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಕಳಿಸಿ ಕೊಡುವುದಾಗಿ ಭರವಸೆ ನೀಡಿದರು. ಈ ವೇಳೆಯಲ್ಲಿ ದೇವಿಂದ್ರಪ್ಪ ಗೌಡ ಪಾಟೀಲ್, ನಾಗಪ್ಪ ಪಾಟೀಲ್, ಮಹೇಶ್ ಕೋರವಾರ, ಅಕ್ಕನ ಬಂಡಿ, ಚನ್ನಪ್ಪ ಹೊಸಮನಿ ಬಾಬುರಾವ್ ಮೂಲಿಮನಿ ಕಾಳೇಶ್ವರ್ ಪೆÇೀಲಿಸ್, ಅಂಬರೀಷ್ ಪೆÇಲೀಸ್ ಪಾಟೀಲ್, ಶ್ರೀ ನಾಥ ಪೆÇೀಲಿಸ್ ಪಾಟೀಲ್, ಗಣೇಶ ಯಕಮಯಿ, ರಾಕೇಶ್ ಹೊಸಮನಿ, ಮಂಜುನಾಥ್ ರಾವೂರ್, ಅಂಬರೀಶ್ ಎಗ್ಗ, ಸೂರ್ಯಕಾಂತ್ ಬಂಡಿ, ಸೇರಿದಂತೆ ಹಲವರು ಇದ್ದರು.