ಕೊನೆಗೂ ಉಪ್ಪಾರವಾಡಿ ಗ್ರಾಮಕ್ಕೆ ಬಂತು ಸರ್ಕಾರಿ ಬಸ
ಕರಜಗಿ:ಜು.14:ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಸರ್ಕಾರಿ ಬಸ್ ಸಂಪರ್ಕವೇ ಕಾಣದ ಅಫಜಲಪುರ ತಾಲೂಕಿನ ಉಪ್ಪಾರವಾಡಿ ಗ್ರಾಮಕ್ಕೆ ಬಸ್ ಬಂದಿದ್ದು, ಗ್ರಾಮಸ್ಥರು ಸಂಭ್ರಮದಿಂದ ಬಸ್?ಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡಿದ್ದಾರೆ.ಈ ಹಳ್ಳಿಯ ಜನರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು.ಬಸ್ ಸಂಪರ್ಕ ಇಲ್ಲದೇ ನಿತ್ಯ ಪರದಾಡುತ್ತಿದ್ದ ಗ್ರಾಮಸ್ಥರು, ವಿದ್ಯಾರ್ಥಿಗಳು ಬಸ್?ಗಾಗಿ ಮನವಿ ಸಲ್ಲಿಸಿದ್ದರು. ಈ ವೇಳೆ ಗ್ರಾಮಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದ ಗ್ರಾಮಸ್ಥರು ವಿದ್ಯಾರ್ಥಿಗಳು ಇದೀಗ ಫುಲ್? ಖುಷ್? ಆಗಿದ್ದಾರೆ.ಪಟ್ಟಣಕ್ಕೆ ಹಾಗೂ ಮಣ್ಣೂರ ಗ್ರಾಮಕ್ಕೆ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಗ್ರಾಮದಿಂದ 8 ಕಿ ಮೀ ನಡೆದುಕೊಂಡೇ ಹೋಗುತ್ತಿದ್ದರು.ಈಗ ಸರ್ಕಾರಿ ಬಸ್?ನಲ್ಲಿ ಪ್ರಯಾಣ ಮಾಡುವ ಸೌಲಭ್ಯ ದೊರೆತಿದೆ. ಬಸ್ ಕಂಡು ಸಂತಸಪಟ್ಟ ಗ್ರಾಮಸ್ಥರು, ಸರ್ಕಾರಿ ಬಸ್?ಗೆ ಬಾಳೆ ದಿಂಡು ಹೂವಿನ ಹಾರ,
ಹಾಕಿ ವಿಶೇಷ ಪೂಜೆ ಸಲ್ಲಿಸಿ, ಸಂಭ್ರಮಿಸಿದರು.