ಕಲಿಕೆ ಹುಟ್ಟಿನಿಂದ ಕೊನೆಯವರೆಗಿನ ಪ್ರಕ್ರಿಯೆ: ಕಾಮಣ್ಣಾ ದಶವಂತ
ಇಂಡಿ:ಜು.14: ಮನುಷ್ಯನಿಗೆ ಶಿಕ್ಷಣ ಆಭರಣವಿದ್ದಂತೆ ಆಭರಣ ಎಷ್ಟು ತೊಟ್ಟರೂ ಸಮಾಧಾನ ಇಲ್ಲ ,ಹೀಗೆ ಶಿಕ್ಷಣ ಎಂಬ ಅಸ್ತ್ರ ಎಷ್ಟು ಪಡೇದರೂ ಕಡೀಮೆ ಇಲ್ಲ ಆದ್ದರಿಂದ ಕಲಿಕೆ ಹುಟ್ಟಿನಿಂದ ಕೊನೆಯವರೆಗೂ ನಡೆಯುತ್ತದೆ. ಶಿಕ್ಷಣ ಸಂಸ್ಥೆಗಳು ಎಷ್ಟು ಕಟ್ಟಿದರೂ ಮತ್ತೆ ಮತ್ತೆ ಕಟ್ಟಬೇಕು ಎಂಬ ತವಕ ಇರುತ್ತದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಾಜಿ ಗ್ರಾ.ಪಂ ಅಧ್ಯಕ್ಷ ಹಾಲಿ ಸದಸ್ಯ ಕಾಮಣ್ಣಾ ದಶವಂತ. ಹೇಳಿದರು.
ತಾಲೂಕಿನ ಚವುಡಿಹಾಳ ಗ್ರಾಮದ ಶ್ರೀಭಾಗ್ಯವಂತಿ ಪದವಿ ಪೂರ್ವಕಾಲೇಜಿನಲ್ಲಿ2024-25ನೇ ಸಾಲಿನ ವಿಧ್ಯಾರ್ಥಿಗಳ ಶಾಲಾ ಸಂಸತ್ತು ಉದ್ಘಾಟಿಸಿ ಮಾತನಾಡಿ ಶ್ರೀಭಾಗ್ಯವಂತಿ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಅನೇಕ ಕಾಣದ ಕೈಗಳ ಸಹಕಾರ ಇದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಹುಟ್ಟುಹಾಕುವಾಗ ಅನೇಕ ಅಡೆ ತಡೆಗಳು ಬಂದಿವೆ ಆದರೆ ಶ್ರೀ ಭಾಗ್ಯವಂತಿ ದೇವಿಯ ಕೃಪಾರ್ಶೀವಾದ ಅದ್ಭುತ ಶಕ್ತಿಯಿಂದ ಇಂದು ಶಿಕ್ಷಣ ಸಂಸ್ಥೆ ಬೆಳೆದು ಹೆಮ್ಮರವಾಗಿದೆ ಇದಕ್ಕೇಲ್ಲ ಗ್ರಾಮಸ್ಥರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪಾಲಕರ ಸಹಕಾರ ಕಾರಣ . ಗಡಿ ಭಾಗದಲ್ಲಿ ಮುಂಬರುವ ದಿನಗಳಲ್ಲಿ ಬೇರೆ ಬೇರೆ ಕೋರ್ಸು ತರುವ ನಿರೀಕ್ಷೆ ಇದೆ . ನಿಮ್ಮೇಲ್ಲರ ಸಹಕಾರ ಸದಾ ಇರಲಿ ಎಂದರು.
ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಾಂತಪ್ಪ ದಶವಂತ ಮಾತನಾಡಿ ಶಾಲೆ ಎಂಬುದು ಜೀವಂತ ದೇವರ ಗುಡಿ ಮಕ್ಕಳೇ ದೇವರು ಎಂಬ ಕಲ್ಪನೆಯಿಂದ ಶಾಲೆ ಕಟ್ಟಲಾಗಿದೆ.ಶಾಲಾ ಸಂಸತ್ತು ಸ್ಥಾಪಿಸುವ ಉದ್ದೇಶ ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯಲಿ ವಿಧ್ಯಾರ್ಥಿಗಳು ಪ್ರಜಾಪ್ರಭುತ್ವ ಮಾದರಿಯಲ್ಲಿ ಸಾಗಲಿ, ನಾಯಕತ್ವದ ಗುಣ ಬೆಳೆಯಲಿ ಎಂಬ ಉದ್ದೇಶದಿಂದ ಶಾಲಾ ಸಂಸತ್ತು ರಚನೆ ಮಾಡಲಾಗಿದೆ ಎಂದರು.
ಪ್ರಾಚಾರ್ಯ ಚಂದ್ರಶೇಖರ ದಶವಂತ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾ.ಪಂ ಹಾಲಿ ಸದಸ್ಯ ಮಾಜಿ ಅಧ್ಯಕ್ಷ ಕಾಮಣ್ಣಾ ದಶವಂತ, ರಾಮಣ್ಣಾ ದಶವಂತ, ಶಿವಾನಂದ ದಶವಂತ, ವಿಶ್ವವಾಣಿ ಪತ್ರಕರ್ತರ ಶರಣಬಸಪ್ಪಾ .ಎನ್.ಕೆ, ಕಾರ್ಯದರ್ಶಿ ಚಂದು ದಶವಂತ, ಬಸವರಾಜ ರೋಡಗಿ, ಪ್ರಕಾಶ ಹಲಸಂಗಿ, ಎಸ್,.ಆಯ್ ಕಾರಬಾರಿ, ಪಿ.ಆರ್ ನಾಯಕ, ಆಡಳಿತಾಧಿಕಾರಿ ಎಸ್.ಆಯ್ ಹಿರೇಮಠ ಉಪನ್ಯಾಸಕರಾದ ಪ್ರಕಾಶ ಹಲಸಂಗಿ, ಸುನೀಲಕುಮಾರ ಜತ್ತಿ, ಎಚ್ ಆರ್ ಪೂಜಾರಿ ಸೇರಿದಂತೆ ಕಾಲೇಜಿ ಉಪನ್ಯಾಸಕರು ಸಿಬ್ಬಂದಿ ಆಡಳಿತ ಮಂಡಳಿ ಸರ್ವಸದ್ಯರು ಉಪಸ್ಥಿತರಿದ್ದರು.
ಶಾಲಾ ಸಂಸತ್ತಿನಲ್ಲಿ ಆಯ್ಕೆಯಾದ ವಿಧ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋದಿಸಿ ನಂತರ ಶಾಲಾ ಸಂಸತ್ತು ಆಯ್ಕೆಯ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.