ಸೊಳ್ಳೆ ಓಡಿಸುವ ನೆಪದಲ್ಲಿ ಹೊಗೆ ಹಾಕುವುದು ಮಾಲಿನ್ಯಕಾರಕ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೧೪;ಪ್ರತಿಯೊಂದು ಗ್ರಾಮಗಳಲ್ಲಿ ಅಂಗಡಿ ಮುಂಭಾಗದಲ್ಲಿ, ಹೊರಾಂಗಣದಲ್ಲಿ ಕುಳಿತ ಜನರು, ಸೊಳ್ಳೆಗಳಿಂದ ಮುಕ್ತಿ ಪಡೆಯಲು, ಪ್ಲಾಸ್ಟಿಕ್ ಕಸಗಳನ್ನ ಗುಡ್ಡೆ ಹಾಕಿಕೊಂಡು, ಬೆಂಕಿ ಹಾಕಿ, ಹೊಗೆಯಿಂದ ಸೊಳ್ಳೆಗಳನ್ನು ಓಡಿಸಲು ಪ್ರಯತ್ನಿಸುವುದು, ಪರಿಸರಕ್ಕೆ ಮಾರಕ ಮತ್ತು ಜನರ ಆರೋಗ್ಯಕ್ಕೂ ಸಹ ಅಪಾಯಕಾರಕ ಎಂದು ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ವಿನಂತಿಸಿಕೊAಡಿದ್ದಾರೆ.ಎಲ್ಲಾ ಕಸಗಳಿಗೂ ಬೆಂಕಿ ಹಾಕುವುದರಿಂದ ಸೊಳ್ಳೆಗಳು ನಿರ್ನಾಮವಾಗುವುದಿಲ್ಲ, ಕೊಚ್ಚೆ ನೀರು, ಮಳೆ ನೀರು ಸಂಗ್ರಹವಾದ ಕಡೆ, ಸೊಳ್ಳೆಗಳು ಉತ್ಪಾದನೆಯಾಗಿ, ಹಲವಾರು ರೋಗಗಳನ್ನ ಹರಡುತ್ತಿದೆ, ಕೊಚ್ಚಿ ಮತ್ತು ನಿಂತ ನೀರನ್ನು ನಾವು ಸರಿಪಡಿಸುವುದರ ಬಗ್ಗೆ ಯೋಚಿಸಬೇಕು ಹೊರತು, ಮನೆ ಮುಂದೆ ಇರುವ ಎಲ್ಲಾ ಪ್ಲಾಸ್ಟಿಕ್ ಕಸಗಳನ್ನ ಗುಡ್ಡೆ ಹಾಕಿಕೊಂಡು, ಅದಕ್ಕೆ ಬೆಂಕಿ ಹಚ್ಚಿ, ಸೊಳ್ಳೆಗಳನ್ನು ಓಡಿಸುತ್ತೇವೆ ಎಂಬುದು ವೈಜ್ಞಾನಿಕವಾಗಿ ಸರಿಯಲ್ಲ. ಆ ಪ್ಲಾಸ್ಟಿಕ್ ಸುಟ್ಟ ಹೊಗೆಯನ್ನ ಸೇವನೆ ಮಾಡಿದ ಮನುಷ್ಯನಿಗೂ, ಸಹ ಡಯಾಕ್ಸೆನ್ ಎಂಬ ವಿಷಕಾರಿ ಅನಿಲ ದೇಹವನ್ನು ಒಕ್ಕೂ, ಮುಂದೆ ಕ್ಯಾನ್ಸರ್ ಅಂತ ಮಾರಕರ ರೋಗವನ್ನ ತಂದು ಒಡ್ಡುತ್ತದೆ. ಹಾಗಾಗಿ ಜನರು ಪ್ಲಾಸ್ಟಿಕ್‌ಗೆ ಬೆಂಕಿ ಹಾಕುವುದು, ಕಸದ ಗುಡ್ಡೆಗಳಿಗೆ ಬೆಂಕಿ ಹಾಕುವುದು ಮಾಡದೆ, ವಾಯುಮಾಲಿನ್ಯದ ಬಗ್ಗೆ ಅರಿವನ್ನ ಮೂಡಿಸಿಕೊಂಡು, ಪರಿಸರವನ್ನ ಸ್ವಚ್ಛವಾಗಿಟ್ಟುಕೊಳ್ಳುವುದರ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.