ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-2024 ಪ್ರಶಸ್ತಿ ಕೊಳ್ಳೇಗಾಲ ಎ.ಸಿ. ಬಿ.ಆರ್ ಮಹೇಶ್ ಆಯ್ಕೆ
ಸಂಜೆವಾಣಿ ವಾರ್ತೆ
ಹನೂರು ಸೆ 28 :– ಕೊಳ್ಳೇಗಾಲ ಉಪ ವಿಭಾಗಾಧಿಕಾರಿಯಾಗಿ ಕಳೆದ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ್ ಬಿ.ಆರ್.ಅವರನ್ನು “ವರ್ಷದ 2024″ರ ಅತ್ಯುತ್ತಮ ಅಧಿಕಾರಿಯಾಗಿ ಆಯ್ಕೆ ಮಾಡಿ ಸನ್ಮಾನಿಸಲಾಗಿದೆ.
ಜನಸ್ನೇಹಿ ಅಧಿಕಾರಿ ಎಂದೆ ಹೆಸರು ಪಡೆದಿರುವ ಮಹೇಶ. ಬಿ.ಆರ್.ಅವರು ಸಾರ್ವಜನಿಕರು ಯಾವುದೇ ಸಮಸ್ಯೆಯನ್ನು ತೆಗೆದುಕೊಂಡು ಹೋದರು ಉತ್ತಮ ರೀತಿಯಲ್ಲಿ ಸ್ಪಂದನೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಉತ್ತಮ ಅಧಿಕಾರಿ ಎಂದೇ ಹೇಳಬಹುದು.
ಬೆಂಗಳೂರಿನಲ್ಲಿ ನಡೆದ ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಅಧ್ಯಕ್ಷತೆಯಲ್ಲಿ, ವಿಕಾಸ ಸೌಧ ಅಭಿನಂದನಾ ಸಭೆಯಲ್ಲಿ “ವರ್ಷದ -2024” ಅತ್ಯುತ್ತಮ ಅಧಿಕಾರಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯನ್ನು ಘೋಷಿಸಲಾಗಿದೆ.