ಕೃಷಿ ಭಾಗ್ಯ ಅರ್ಜಿ ಸಲ್ಲಿಕೆಗೆ ಅ.೧೦ರ ಕೊನೆಯದಿನ
ಆಳಂದ:ಸೆ.೨೮: ೨೦೨೪-೨೫ ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿ ತಾಲೂಕನ್ನು ಮಳೆಯಾಶ್ರಿತ ಕೃಷಿ ನೀತಿ ೨೦೧೪ ರನ್ವಯ ಪ್ಯಾಕೇಜ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಆಸಕ್ತ ರೈತರು ಅರ್ಜಿ ಸಲ್ಲಿಸಬೇಕು ಎಂದು ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಆಳಂದ, ಖಜೂರಿ, ಮಾದನ ಹಿಪ್ಪರಗಾ, ನರೋಣಾ ಮತ್ತು ನಿಂಬರ್ಗಾ ಹೋಬಳಿಗಳಲ್ಲಿ ಸದರಿ ಯೋಜನಗಳನ್ನು ಅನುಷ್ಠಾನಗೊಳಿಸಲಾಗುವುದು. ಕೃಷಿ ಭಾಗ್ಯ ಯೋಜನೆಯು ಪ್ಯಾಕೇಜ್ ಮಾದರಿಯಲ್ಲಿದ್ದು. ಕ್ಷೇತ್ರ ಬದು, ಕೃಷಿ ಹೊಂಡ, ಪಾಲಿಧಿನ ಹೊದಿಕೆ, ಕೃಷಿಹೊಂಡದ ಸುತ್ತ ತಂತಿ ಬೇಲಿ, ಡಿಸೇಲ, ಪೆಟ್ರೋಲ ಪಂಪ ಸೇಟ್, ಲಘು ನೀರಾವರಿ ಘಟಕ ಒಳಗೊಂಡಿರುತ್ತದೆ ಎಂದು ಅವರು ವಿವರಿಸಿದ್ದಾರೆ.
ರೈತರು ಎಲ್ಲಾ ಘಟಕಗಳನ್ನು ಅನುಷ್ಠಾನಗೊಳಿಸುವುದು ಕಡ್ಡಾಯವಾಗಿರುತ್ತದೆ. ಹಿಂದಿನ ವರ್ಷಗಳಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿಹೊಂಡ ನಿರ್ಮಿಸಿಕೊಂಡಿರುವ ರೈತರಿಗೆ ಸದರಿ ಯೋಜನೆಯಲ್ಲಿ ಪರಿಗಣಿಸುವುದಿಲ್ಲ. ನಿಗದಿ ಪಡಿಸಿದ ಅರ್ಜಿ ನಮೂನೆಯಲ್ಲಿ ೧೦ ಆಕ್ಟೋಬರ್ ೨೦೨೪ ರವರೆಗೆ ಅರ್ಜಿಗಳನ್ನು ಸಂಬAಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.
ಜೇಷ್ಠತ ಆಧಾರದ ಮೇಲೆ ಫಲಾನುಭವಿಗಳನ್ನು ಅಂತಿಮ ಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯಕ್ಕೆ ಭೇಟಿ ನೀಡುವಂತೆ ಅವರು ತಿಳಿಸಿದ್ದಾರೆ.