ಹಾರಕೂಡದ ಶ್ರೀಗಳಿಗೆ ಗುರುವಂದನೆ
ಸೇಡಂ, ಜು,14:ತಾಲೂಕಿನ ಮೀನಹಾಬಳ ಗ್ರಾಮದಲ್ಲಿರುವ ಗ್ರಾಮಸ್ಥರ ವತಿಯಿಂದ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರಿಗೆ ಗುರುವಂದನೆ ಹಾಗೂ 677ನೇ ತುಲಭಾರ ಕಾರ್ಯಕ್ರಮ ಜರುಗಿತು.ಗ್ರಾಮಕ್ಕೆ ಆಗಮಿಸಿದ ಹಾರಕೂಡ ಶ್ರೀಗಳಿಗೆ ಅಲಂಕೃತ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಹಾರಕೂಡ ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ವೇದಿಕೆಗೆ ಭಕ್ತಿ ಶ್ರದ್ಧೆಯಿಂದ ಬರಮಾಡಿಕೊಳ್ಳಲಾಯಿತು. ಈ ವೇಳೆಯಲ್ಲಿ ಗ್ರಾಮದ ಮಹಿಳೆಯರು ಮಕ್ಕಳು ಹಿರಿಯರು ಯುವಕರು ಇದ್ದರು.