ಸಿಸಿ ರಸ್ತೆ ಕಾಮಗಾರಿಗೆ ಚಾಲನೆ
ಕಲಬುರಗಿ:ಜು.14: ನಗರದ ವಾರ್ಡ್ ನಂಬರ್ 47 ರಲ್ಲಿ ಬರುವ ರಾಜಾಪೂರ ಕಾಲೋನಿ ಹಾಗೂ ರ್ಸವೋದಯ ನಗರದಲ್ಲಿ ಕೆಕೆಆರ್‍ಡಿಬಿ ಅನುದಾನದಲ್ಲಿ 30 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದಕ್ಷಿಣ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಫೈಲ್, ದಕ್ಷಿಣ ಗ್ರಾಮಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ಮಾಜಿ ಮೇಯರ್ ರವಿಂದ್ರ ಹೋನ್ನಳ್ಳಿ, ಮಾಜಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡ ರಾಹುಲ ಅಶೋಕ ಹೋನ್ನಳ್ಳಿ, ಮುಖಂಡರಾದ ಬಸವರಾಜ ದಂಡಪಗೋಳ್ಳ, ಮಲ್ಲಿಕಾರ್ಜುನ ಮಿಣಜಗಿ, ಸಂಘಪಾಲ ಕಾಂಬಳೆ, ಕುಮಾರ ಯಾಧವ, ಪ್ರಶಾಂತ ಕಠಿ, ತುಳಜಾರಾಮ, ಮಂಜುನಾಥ ಹಾಗರಗಿ, ಸಾಯಬಣ್ಣ ಹೋಳಕರ್ ಸೇರಿದಂತೆ ಬಡಾವಣೆಯ ಮುಖಂಡರು ಇದ್ದರು.