ವಾಣಿಜ್ಯ ವಿಭಾಗದಿಂದ ಸಂಶೋಧನಾ ವಿಧಾನದ ಕಾರ್ಯಗಾರ
ಸಂಜೆವಾಣಿ ವಾರ್ತೆ
ಕೊಟ್ಟೂರು:, ಜು.14: ಪಟ್ಟಣದ  ಕೊಟ್ಟೂರೇಶ್ವರ ಮಹಾವಿದ್ಯಾಲಯ ಸ್ನಾತಕೋತ್ತರ ವಾಣಿಜ್ಯ ವಿಭಾಗದಿಂದ ಒಂದು ದಿನದ ಸಂಶೋಧನಾ ವಿಧಾನ ಕಾರ್ಯಗಾರವನ್ನು ರಾಜ್ ಭವನದಲ್ಲಿ ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ. ರವಿಕುಮಾರ್ ಮಾತನಾಡಿ ವಿಶ್ವವಿದ್ಯಾಲಯದ ಆದೇಶದ ಅನ್ವಯ  ಎಂ.ಕಾಂ. ಮತ್ತು ಬಿ.ಕಾಂ ವಿದ್ಯಾರ್ಥಿಗಳಿಗೆ ಸಂಶೋಧನಾ ವಿಧಾನವನ್ನು ಪಠ್ಯಕ್ರಮದಲ್ಲಿ ಅಳವಡಿಸಿರುವುದು ತುಂಬಾ ಉಪಯುಕ್ತವಾಗಿರುತ್ತದೆ ಏಕೆಂದರೆ ವಿದ್ಯಾರ್ಥಿಗಳು ಸ್ನಾತಕೋತ್ತರ, ಪದವಿ ಮುಗಿದ ನಂತರ ತಮ್ಮ ಉನ್ನತ ವ್ಯಾಸಂಗದ ಎಂ.ಫಿಲ್, ಪಿ. ಹೆಚ್ ಡಿ  ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಸಂಶೋಧನಾ ವಿಧಾನದಲ್ಲಿ ಪ್ರಾಥಮಿಕ ದತ್ತಾಂಶಗಳ ಸಂಗ್ರಹಣೆ, ಉಲ್ಲೇಖ ಹಾಗೂ ವಿವಿಧ ಕಂಪನಿ ಅಥವಾ ಸಂಘ-ಸಂಸ್ಥೆಗಳಲ್ಲಿ  ಮಾಹಿತಿ ಕ್ರೊಢೀಕರಿಸಿ  ಪ್ರಬಂಧವನ್ನು ಬರೆಯಲು ತುಂಬಾ ಅನುಕೂಲವಾಗುತ್ತದೆ. ಯಾವ ವಿದ್ಯಾರ್ಥಿಗಳಲ್ಲಿ   ಆಸಕ್ತಿ , ಶ್ರಮ ಇರುತ್ತದೆಯೋ ಅವರು ಸಂಶೋಧನೆಯಲ್ಲಿ ಯಶಸ್ಸು ಸಾಧಿಸುತ್ತಾರೆ  ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ. ಮುಬಾರಕ್  ವಿದ್ಯಾರ್ಥಿಗಳಿಗೆ ಸಂಶೋಧನಾ ವಿಧಾನಗಳ ಬಗ್ಗೆ ಸ್ವ ವಿವರವಾಗಿ ತಿಳಿಸಿಕೊಟ್ಟರು.
ನಂತರ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳೊಂದಿಗೆ  ಸಂವಾದ ಮಾಡುವುದರ ಮುಖಾಂತರ ತಮ್ಮ ಸಂದೇಹಗಳಿಗೆ ಪರಿಹಾರವನ್ನು ಕಂಡುಕೊಂಡರು.
ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್ ಎಂ.ಹೆಚ್, ನ್ಯಾಕ್ ಕೋ ಆರ್ಡಿನೇಟರ್ ಡಾ. ಪೃಥ್ವಿರಾಜ್,  ಡಿ. ರವೀಂದ್ರ ಗೌಡ, ಸಿ.ಬಸವರಾಜ್, ವಸಂತ್ ಕುಮಾರ್ ಲೆಕ್ಕಪರಿಶೋಧಕರು, ದೈಹಿಕ ನಿರ್ದೇಶಕರಾದ ಡಾ.ಶಿವಕುಮಾರ್, ಬಸವರಾಜ್ ಬಣಕಾರ್ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸುಮಾರು 260 ಕ್ಕೂ ಹೆಚ್ಚು ಅಂತಿಮ ವರ್ಷದ ಪದವಿಯ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಾದ ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರಿನ ಇತರೆ ಕಾಲೇಜುಗಳಿಂದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಕಾವೇರಿ ಮತ್ತು ಅಮೃತ ನಿರೂಪಿಸಿದರು. ವಿಭಾಗದ ಮುಖ್ಯಸ್ಥರು ಪ್ರಾಸ್ತಾವಿಕ ನುಡಿದರು, ವಿದ್ಯಾರ್ಥಿ ಅಮೂಲ್ಯ ವಂದನಾರ್ಪಣೆ ನೆರವೇರಿಸಿದರು.