ಉಭಯ ನ್ಯಾಯಾಲಯದಿಂದ  ರಾಷ್ಟೀಯ ಲೋಕ  ಆದಾಲತ್‌ನಲ್ಲಿ  1447  ಪ್ರಕರಣಗಳು ಇತ್ಯರ್ಥ
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಜು.14:  ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ  ನಡೆದ ತಾಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ಹರಪನಹಳ್ಳಿ ಉಭಯ ನ್ಯಾಯಾಲಯಗಳಲ್ಲಿ ಶನಿವಾರ ಆಯೋಜಿಸಿದ್ದಲಾಗಿದ್ದ ರಾಷ್ಟೀಯ  ಲೋಕ ಆದಾಲತ್‌ನಲ್ಲಿ ನಡೆದ ಒಟ್ಟು  1676 ಪ್ರಕರಣಗಳನ್ನು ಕೈಗೆತ್ತಿಕೊಂಡು, 1447  ಪ್ರಕರಣಗಳನ್ನು ಉಭಯ ನ್ಯಾಯಾಲಯದ  ಹಿರಿಯ ನ್ಯಾಧೀಶರಾದ ಉಷಾರಾಣಿ.ಆರ್. ಮತ್ತು   ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಮನುಶರ್ಮ.ಎಸ್.ಪಿ. ನೇತೃತ್ವದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.
ಪಟ್ಟಣದ ಉಭಯ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಆದಾಲತ್ನಲ್ಲಿ ರಸ್ತೆ ಅಪಘಾತ,ಚೆಕ್ ಬೌನ್ಸ್ , ಬ್ಯಾಂಕ್ ಸಾಲ ವಸೂಲಿ, ಜಮೀನು ವಿವಾದ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ಲಿ ಪ್ರಕರಣ,ಮೋಟಾರು ವಾಹನ, ಸಹಕಾರಿ ಬ್ಯಾಂಕುಗಳು ,  ನಿವೇಶನ ಮಾರಾಟ ಒಳಗೊಂಡಂತೆ ಹಿರಿಯ  ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ  ಉಷಾರಾಣಿ.ಆರ್  ರವರ ನ್ಯಾಯಾಲಯದಲ್ಲಿ ಒಟ್ಟು 786 ಪ್ರಕರಣಗಳ ಪೈಕಿ 682 ಪ್ರಕಣಗಳನ್ನು ಇತ್ಯರ್ಥ ಪಡಿಸಿ, ಒಟ್ಟು  72,14,580 ಲಕ್ಷ. ರೂ.ಗಳು ರಸ್ತೆ ಅಫಘಾತ ಸೇರಿದಂತೆ ಇತರೆ  ಪ್ರಕರಣಗಳಿಂದ ಹಣದ ರೂಪದಲ್ಲಿ  ಇತ್ಯರ್ಥ ಪಡೆಸಿದರು,  ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಮನುಶರ್ಮ ಎಸ್.ಪಿ. ರವರ ನ್ಯಾಯಾಲಯದಲ್ಲಿ ಒಟ್ಟು 890 ಪ್ರಕರಣಗಳ ಪೈಕಿ  765  ಪ್ರಕಣಗಳನ್ನು  ಇತ್ಯರ್ಥ ಪಡೆಸಿ, ಒಟ್ಟು  35,35,655 ಲಕ್ಷ ರೂ.ಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡೆಸಿದರು. ಉಭಯ ನ್ಯಾಯಾಲದಲ್ಲಿ  ಒಟ್ಟು 1447  ಪ್ರಕರಣ ಗಳ ಜೊತೆ ಉಭಯ ನ್ಯಾಯಾಲಯಗಳಿಂದ ಒಟ್ಟು;- 10,750,235  ಕೋಟಿ ರೂ.ಗಳ ಮೊತ್ತವನ್ನು  ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮತ್ತು ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸುಮಾರು ವರ್ಷಗಳಿಂದ ಬಿರುಕು ಗೊಂಡಿದ್ದ ದಾಂಪತ್ಯ ಜೀವನದ ಜೋಡಿಗಳನ್ನು ಪರಸ್ಪರ ಹೊಂದಾಣಿಕೆಮಾಡಿಸಿ ಇಬ್ಬರ ಮನಸ್ಸುನ್ನು ಬದಲಾಯಿಸಿ ನೂತನ ಜೀವನಕ್ಕೆ ನ್ಯಾಯಾಧೀಶರುಗಳು ಮನವೋಲಿಸಿ ಸತಿ ಪತಿಗಳಿಗೆ  ದಾಂಪತ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದ ವಕೀಲರುಗಳ ಮೂಲಕ ಸಂತೋಷ ವ್ಯಕ್ತಪಡಿಸಿ . ಒಗ್ಗೂಡಿಸಿ ಯಶ್ವಸಿಗೋಳಿಸಿದರು ನಂತರ ಉಭಯ ನ್ಯಾಯಾಲಯದ ನ್ಯಾಯಾಧೀಶರುಗಳು ಬಿರುಕು ಗೊಂಡಿದ್ದ ದಾಂಪತ್ಯ ಜೀವನವನ್ನು ಮತ್ತೆ ಜೊತೆ ಗುಡಿಸುವಲ್ಲಿ ನ್ಯಾಯಾಧೀಶರುಗಳು ಯಶ್ವಸಿಯಾದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೇಲ್ ಉಪಾಧ್ಯಕ್ಷ ಸಿ ಪೀರ್ ಅಹಮ್ಮದ್,   ಕಾರ್ಯದರ್ಶಿ ಜಿ.ಎಸ್ ಎಂ. ಕೋಟ್ರಯ್ಯ, ಜಂಟಿ ಕಾರ್ಯದರ್ಶಿ ಹೆಚ್.ಎಂ. ಕೇಶವಮೂರ್ತಿ, ಖಜಾಂಚಿ  ಹೂಲೇಪ್ಪ, , ಸರ್ಕಾರಿ ಅಭಿಯೋಜಕರಾದ ಮಿನಾಕ್ಷೀ ಎನ್, ನಿರ್ಮಲ,  ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯರಾದ ಕೋಟ್ರೇಶ್, ಬಸವರಾಜ್. ಹಾಗೂ  ಸೇರಿದಂತೆ  ನ್ಯಾಯಾಲಯದ ಸಿಬ್ಬಂದಿಗಳು  ಮತ್ತು ಇತರರು ಇದ್ದರು.